ಮಧ್ಯಪ್ರದೇಶ: CM ಕಮಲ್ ನಾಥ್ ಮೇಲೆ ಶಿವರಾಜ್ ದಾಳಿ, ಭೋಪಾಲ್ ತಲುಪಿದ ಬಿಜೆಪಿ ಶಾಸಕರು
`ಮಧ್ಯಪ್ರದೇಶ ಸರ್ಕಾರ ಬಹುಮತ ಕಳೆದುಕೊಂಡಿದೆ` ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಭೋಪಾಲ್: ಕಮಲ್ ನಾಥ್ ಸರ್ಕಾರದ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯ ಸರ್ಕಾರವು ಬಹುಮತವನ್ನು ಕಳೆದುಕೊಂಡಿದೆ ಮತ್ತು ಈ ಕಾರಣಕ್ಕಾಗಿ ಫ್ಲೋರ್ ಟೆಸ್ಟ್ ನಿಂದ ತಪ್ಪಿಸಿಕೊಳ್ಳಲು ಬಯಸುತ್ತಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
'ಮಧ್ಯಪ್ರದೇಶ ಸರ್ಕಾರ ಬಹುಮತ ಕಳೆದುಕೊಂಡಿದೆ. ಸೋಮವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ. ಮುಖ್ಯಮಂತ್ರಿ ಅವರು ಬಹುಮತ ಪರೀಕ್ಷೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಇದೀಗ ಅದರಿಂದ ಓಡಿಹೋಗುವ ಪ್ರಯತ್ನ ನಡೆಯುತ್ತಿದೆ. ಬಹುಮತ ಸಾಬೀತು ಪಡಿಸುವುದಷ್ಟೇ ನಮ್ಮ ಬೇಡಿಕೆ ಎಂದವರು ತಿಳಿಸಿದ್ದಾರೆ. ಗಮನಾರ್ಹವಾಗಿ ಎಲ್ಲಾ ಬಿಜೆಪಿ ಶಾಸಕರು ಸಹ ತಡರಾತ್ರಿ ಜೈಪುರದಿಂದ ಭೋಪಾಲ್ ತಲುಪಿದ್ದಾರೆ.
ಬಿಜೆಪಿ ಶಾಸಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಬಗ್ಗೆ ಸಿಎಂ ಕಮಲ್ ನಾಥ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವರಾಜ್, "ಯಾವುದೇ ಶಾಸಕರನ್ನು ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಗಿಲ್ಲ, ರಾಜ್ಯ ಸರ್ಕಾರವು ಅವರಿಗೆ ಭದ್ರತೆ ನೀಡಲು ಏಕೆ ಸಾಧ್ಯವಾಗುತ್ತಿಲ್ಲ" ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಗಮನಿಸಬೇಕಾದ ಸಂಗತಿಯೆಂದರೆ ಮಧ್ಯಪ್ರದೇಶ ವಿಧಾನಸಭೆ (Madhya Pradesh Assembly) ಯ ಬಜೆಟ್ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗುತ್ತಿದೆ. ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ, ಆದರೆ ಬಹುಮತ ಸಾಬೀತು ಪಡಿಸಲಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಅನುಮಾನವಿದೆ. ವಾಸ್ತವವಾಗಿ, ವಿಧಾನಸಭೆಯ ಕಾರ್ಯಸೂಚಿಯಲ್ಲಿ ಬಹುಮತ ಸಾಬೀತಿನ ವಿಷಯವಿಲ್ಲ. ರಾಜ್ಯಪಾಲರ ಭಾಷಣವನ್ನು ಮಾತ್ರ ಉಲ್ಲೇಖಿಸಲಾಗಿದೆ.
ಇಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಕಮಲ್ ನಾಥ್ ಅವರು 21 ಶಾಸಕರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡರೆ, ಫ್ಲೋರ್ ಟೆಸ್ಟ್ ತಾರ್ಕಿಕತೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ, ರಾಜ್ಯಪಾಲರ ಆದೇಶವನ್ನು ಕಮಲ್ ನಾಥ್ ನಿರ್ಲಕ್ಷಿಸುತ್ತಾರೆಯೇ ಎಂಬ ಅನುಮಾನವೂ ಮೂಡಿದೆ.
ಸಂಕಷ್ಟದಲ್ಲಿ ಕಮಲ್ ನಾಥ್ ಸರ್ಕಾರ:
ಕಮಲ್ ನಾಥ್ ಸರ್ಕಾರದ ಮೇಲೆ ಬಿಕ್ಕಟ್ಟು ಮುಂದುವರೆದಿದೆ. ಬೆಂಗಳೂರಿನಲ್ಲಿ ಉಳಿದಿರುವ 16 ಬಂಡಾಯ ಶಾಸಕರು ಸಹ ಸ್ಪೀಕರ್‌ಗೆ ಪತ್ರವೊಂದನ್ನು ಬರೆದಿದ್ದು, ಅವರ ರಾಜೀನಾಮೆಯನ್ನು ಸ್ವೀಕರಿಸದ ಹೊರತು ತಾವು ಭೋಪಾಲ್‌ಗೆ ಹಿಂತಿರುಗುವುದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ತನ್ನ ಶಾಸಕರನ್ನು ಸೋಮವಾರ ವಿಧಾನಸಭೆಗೆ ಹಾಜರಾಗಿ ಬಿಜೆಪಿ ಪರವಾಗಿ ಮತ ಚಲಾಯಿಸುವಂತೆ ಕೋರಿ ವಿಪ್ ಹೊರಡಿಸಿದೆ. ಬಿಜೆಪಿ ಮುಖಂಡರಾದ ನರೋತ್ತಮ್ ಮಿಶ್ರಾ ಮತ್ತು ಗೋಪಾಲ್ ಭಾರ್ಗವ ಅವರು ಭಾನುವಾರ ಭೋಪಾಲ್‌ನಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಬಹುಮತ ಸಾಬೀತು ಪಡಿಸಲು ಸರ್ಕಾರಕ್ಕೆ ಸೂಚಿಸುವಂತೆ ಒತ್ತಾಯಿಸಿದರು.