ನವದೆಹಲಿ: ಮಧ್ಯಪ್ರದೇಶದ ಜೈಸಿಂಗ್ ನಗರ್ ಜಿಲ್ಲೆಯ ಶಾದೊಲ್ ನ ಹೊಲವೊಂದರಲ್ಲಿ ರಾಷ್ಟ್ರೀಯ ಪ್ರಾಣಿ ಹುಲಿ ಮೃತಪಟ್ಟಿದೆ. ಆದರೆ ಇದುವರೆಗೂ ಹುಲಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ. ಆ ಮೂಲಕ ಮಧ್ಯ ಪ್ರದೇಶದಲ್ಲಿ ಹುಲಿಗಳ ಸಾವಿನ ಪ್ರಮಾಣದಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿರುವುದು  ಆತಂಕಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಮಧ್ಯಪ್ರದೇಶ ಸರ್ಕಾರವು ಹುಲಿಯ ರಾಜ್ಯದ ಮಾನ್ಯತೆಗಾಗಿ ಪ್ರಯತ್ನಿಸುತ್ತಿದ್ದು, ಆದರೆ ಈ ಹುಲಿಯ ಸಾವುಗಳ ಸಂಖ್ಯೆಯಲ್ಲಿನ ಏರಿಕೆ ನಿಜಕ್ಕೂ ಅದಕ್ಕೆ  ಹಿನ್ನಡೆಯನ್ನು ತಂದಿದೆ. ಕಳೆದ 13 ತಿಂಗಳಲ್ಲಿ ರಾಜ್ಯದಲ್ಲಿ ಸುಮಾರು 33 ಹುಲಿಗಳು ಮೃತಪಟ್ಟಿವೆ ಎಂದು ವರದಿಯಾಗಿದೆ. 


ಜಾಗತಿಕವಾಗಿ ಮಧ್ಯಪ್ರದೇಶವು ಹುಲಿಯ ಸಂರಕ್ಷಣೆ ಪ್ರಶಸ್ತ್ಯ ಭೂ ಪ್ರದೇಶವೆಂದು ಹೆಸರಾಗಿದೆ. ವನ್ಯ ಜೀವಿ ತಜ್ಞರ ಅಭಿಪ್ರಾಯದಂತೆ ಇಲ್ಲಿ ಹುಲಿಗಳನ್ನು ಬೇಟೆಯಾಡಲು ವಿದ್ಯುತ್ತಿಕರಣವನ್ನು ಬಳಸಲಾಗುತ್ತಿದೆ ಆದ್ದರಿಂದ ಇದು ನಿಜಕ್ಕೂ ಹುಲಿಗಳ ಸಂರಕ್ಷಣಾ ಕಾರ್ಯದಲ್ಲಿ ಇದು ಸವಾಲಿನ ಸಂಗತಿಯಾಗಿದೆ. ಈಗ ಹುಲಿ ಮೃತಪಡಲು ಕಾರಣವಾದ ಸಂಗತಿಗಳನ್ನು ಪತ್ತೆ ಹಚ್ಚಲು ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.