ರಾಂಪುರ: ಮದರಸಾಗಳು ನಾಥೂರಾಮ್ ಗೋಡ್ಸೆ ಮತ್ತು ಪ್ರಗ್ಯಾ ಸಿಂಗ್​ ಠಾಕೂರ್ ಅಂತಹವರನ್ನು ಎಂದಿಗೂ ರೂಪಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮದರಸಾಗಳನ್ನು ಮುಖ್ಯವಾಹಿನಿ ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಪರ್ಕ ಕಲ್ಪಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಯೋಜನೆ ಬಗ್ಗೆ ಪ್ರತಿಕ್ರಿಯಿಸುತ್ತಾ ಅಜಂ ಖಾನ್ ಈ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರತಿಸ್ಪರ್ಧಿ ಜಯಪ್ರದಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಜಂ ಖಾನ್, ಇದೀಗ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. 


"ನಾಥೂರಾಮ್ ಗೋಡ್ಸೆಯಂತಹ ಸ್ವಭಾವಿರುವ ಅಥವಾ ಪ್ರಗ್ಯಾ ಠಾಕೂರ್ ಅವರಂತಹ ವ್ಯಕ್ತಿತ್ವ ಉಳ್ಳವರನ್ನು ಮದರಸಾಗಳು ಎಂದಿಗೂ ಸೃಷ್ಟಿಸುವುದಿಲ್ಲ. ನಾಥೂರಾಮ್​ ಗೋಡ್ಸೆಯ ಚಿಂತನೆಗಳನ್ನು ಪ್ರಚಾರ ಮಾಡುವವರು ಪ್ರಜಾಪ್ರಭುತ್ವಕ್ಕೆ ಶತ್ರುಗಳು ಹಾಗೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಶಿಕ್ಷೆಗೊಳಗಾದವರನ್ನು ಗೌರವಿಸಲಾಗುವುದಿಲ್ಲ ಎಂದು ಮೊದಲು ಘೋಷಣೆ ಮಾಡಬೇಕು" ಎಂದು ಅಜಂ ಖಾನ್ ಸುದ್ದಿ ಸಂಸ್ಥೆ ಎಎನ್ಐಗೆ ಹೇಳಿಕೆ ನೀಡಿದ್ದಾರೆ.


"ಮದರಸಾಗಳಲ್ಲಿ ಧಾರ್ಮಿಕ ಶಿಕ್ಷ ನೀಡಲಾಗುತ್ತದೆ. ಅದರ ಜೊತೆಗೆ ಇಂಗ್ಲಿಷ್, ಹಿಂದಿ ಮತ್ತು ಗಣಿತವನ್ನೂ ಕಲಿಸಲಾಗುತ್ತದೆ. ನೀವು ನಿಜವಾಗಲೂ ಮದರಸಾಗಳ ಗುಣಮಟ್ಟವನ್ನು ಹೆಚ್ಚಿಸಲು ಬಯಸುವಿರಾದರೆ, ಮೊದಲು ಮದರಸಾಗಳನ್ನು ನಡೆಸಲು ಕಟ್ಟಡಗಳನ್ನು ಕಟ್ಟಿಕೊಡಿ, ಆ ಕಟ್ಟಡಗಳಿಗೆ ಪೀಠೋಪಕರಣಗಳನ್ನು ಪೂರೈಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿ" ಎಂದು ಸಂಸದ ಅಜಂ ಖಾನ್ ಆಗ್ರಹಿಸಿದ್ದಾರೆ.