ನವದೆಹಲಿ : ಮದರಸಾಗಳು ವಿದ್ಯಾರ್ಥಿಗಳನ್ನು ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತವೆ ಎಂದು ಹೇಳಿಕೆ ನೀಡಿದ್ದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ನ ವಾಸಿಮ್ ರಿಜ್ವಿಗೆ ಜಮಾಯತ್ ಉಲಾಮಾ-ಇ-ಹಿಂದ್ ಅಧ್ಯಕ್ಷ ನೋಟಿಸ್ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ದೇಶದಲ್ಲಿ ಮದ್ರಸಾಗಳನ್ನು ಮುಚ್ಚುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಒತ್ತಾಯಿಸಿದ ಹಿನ್ನೆಲೆಯಲ್ಲಿ ಜಮಾಯತ್ ಮುಖ್ಯಸ್ಥರು ಕಾನೂನು ನೋಟಿಸ್ ಕಳುಹಿದೆ.


ದೇಶದಲ್ಲಿನ ಮದರಸಾಗಳನ್ನು ಇಸ್ಲಾಮಿಕ್ ಶಿಕ್ಷಣವನ್ನು ಐಚ್ಚಿಕ ವಿಷಯವಾಗಿ ಕಲಿಸುವಂತಹ ಸಿಬಿಎಸ್ಸಿ ಮತ್ತು ಐಸಿಎಸ್ಸಿ ಮಾನ್ಯತೆ ಪಡೆದ ಶಾಲೆಗಳನ್ನಾಗಿ ಪರಿವರ್ತಿಸುವಂತೆ ಒತ್ತಾಯಿಸಿ ಶಿಯಾ ಬೋರ್ಡ್ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು.


ಮದ್ರಸಾಗಳನ್ನು ಮುಚ್ಚುವ ಬೇಡಿಕೆಯನ್ನು ಸಮರ್ಥಿಸಲು ಅ ಪತ್ರಗಳಲ್ಲಿ 2 ಪ್ರಮುಖ ಕಾರಣಗಳನ್ನು ನಮೂದಿಸಲಾಗಿದೆ. ಮೊದಲನೆಯದು, ಮದರಸಾಗಳಲ್ಲಿನ ಶಿಕ್ಷಣವು ಇಂದಿನ ವಾತಾವರಣಕ್ಕೆ ಸೂಕ್ತವಲ್ಲ ಮತ್ತು ಆದರಿಂದ ದೇಶದಲ್ಲಿ ಯುವಕರು ನಿರುದ್ಯೋಗಿಗಳ ಪಟ್ಟಿಗೆ ಸೇರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.


ಎರಡನೆಯದು, "ಮದರಸಾದಿಂದ ಶಿಕ್ಷಣ ಪಡೆದು ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳ ಉದ್ಯೋಗ ಮಟ್ಟ ತುಂಬಾ ಕಳಪೆಯಾಗಿದೆ. ಹೆಚ್ಚೆಂದರೆ ಮದರಸಾಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹೆಚ್ಚೆಂದರೆ ಉರ್ದು ಅನುವಾದಕರು ಅಥವಾ ತಜ್ಞರು ಕೆಲಸ ಪಡೆಯುತ್ತಾರೆ" ಅವರು ರಿಜ್ವಿ ಹೇಳಿದ್ದಾರೆ. 


ಅಲ್ಲದೆ, ಈ ಸಂಸ್ಥೆಗಳ ಶಿಕ್ಷಣವು ವಿದ್ಯಾರ್ಥಿಗಳನ್ನು ಭಯೋತ್ಪಾದನಾ ಶ್ರೇಣಿಯಲ್ಲಿ ಸೇರಲು ಪ್ರೋತ್ಸಾಹಿಸುತ್ತಿರುವುದು ಕೆಲವು ಪ್ರಕರಣಗಳಲ್ಲಿ ಪತ್ತೆಯಾಗಿದೆ ಎಂದು ಪತ್ರವು ತಿಳಿಸಿದೆ.


ಉತ್ತರ ಪ್ರದೇಶದ ಮದರಸಾದಲ್ಲಿ ನಡೆದ ದಾಳಿಯೊಂದರಲ್ಲಿ ಸುಮಾರು 51 ಬಾಲಕಿಯರನ್ನು ಡಿಸೆಂಬರ್ 30 ರಂದು ರಕ್ಷಿಸಲಾಗಿತ್ತು. ಈ ಪ್ರಕರಣದ ನಂತರ ವಕ್ಫ್ ನಡಿ ನಡೆಯುವ ಎಲ್ಲಾ ಮದರಸಾಗಳನ್ನು ಮುಚ್ಚಲಾಗುವುದು ಎಂದು ಶಿಯಾ ವಕ್ಫ್ ಬೋರ್ಡ್ ಹೇಳಿತ್ತು.