ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಪತ್ರ ಬರೆದಿದ್ದು, ಮದರಸಾಗಳು ಭಯೋತ್ಪಾದಕರನ್ನು ಉತ್ಪಾದಿಸುತ್ತಿದೆ ಮತ್ತು ಅವರನ್ನು ಮುಖ್ಯವಾಹಿನಿಯ ಶಿಕ್ಷಣಕ್ಕೆ ವರ್ಗಾಯಿಸಲು ಪ್ರಯತ್ನಗಳಾಗಬೇಕಿದೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

"ಎಷ್ಟು ಮದ್ರಾಸಾಗಳು ಎಂಜಿನಿಯರ್ರ್ಗಳು, ವೈದ್ಯರು, ಐಎಎಸ್ ಅಧಿಕಾರಿಗಳನ್ನು ಉತ್ಪಾದಿಸಿದೆ" ಎಂದು ಪ್ರಶ್ನಿಸಿರುವ ಶಿಯಾ ಬೋರ್ಡ್ ಅಧ್ಯಕ್ಷ ವಸಿಮ್ ರಿಜ್ವಿ, "ಹೌದು, ಆದರೆ ಕೆಲವು ಮದ್ರಾಸ್ಗಳು ಭಯೋತ್ಪಾದಕರನ್ನು ಉತ್ಪಾದಿಸಿದೆ" ಎಂದು ಹೇಳಿದ್ದಾರೆ.


ಮದರಸಾಗಳನ್ನು ಔಪಚಾರಿಕ ಶಿಕ್ಷಣ ಮಂಡಳಿಗಳ ಅಡಿಯಲ್ಲಿ ತರುವ ಸಲಹೆಯನ್ನು ನೀಡಿರುವ ರಿಜ್ವಿ,  "ಮದರಸಾಗಳು ಸಿಬಿಎಸ್ಇ, ಐಸಿಎಸ್ಇಯೊಂದಿಗೆ ಸಂಯೋಜನೆಗೊಳ್ಳಬೇಕು ಮತ್ತು ಮುಸ್ಲಿಂ-ಅಲ್ಲದ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು, ಧಾರ್ಮಿಕ ಶಿಕ್ಷಣವನ್ನು ಐಚ್ಛಿಕವಾಗಿ ಮಾಡಬೇಕು" ಎಂದು ಹೇಳಿದ್ದಾರೆ. 


ಮುಂದುವರೆದು ಬರೆದಿರುವ ಅವರು, ಭಯೋತ್ಪಾದಕ ಚಟುವಟಿಕೆಗಳಿಗೆ ಸಹಾಯ ಮಾಡಲು ಹಲವಾರು ಮದ್ರಸಾಗಳನ್ನು ಬಳಸಲಾಗುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಗೆ ಬರೆಯಲಾಗಿದ್ದು, ಇದು ದೇಶವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂದಿದ್ದಾರೆ.