Earthquake In Andaman Nicobar: ಅಂಡಮಾನ್ ಮತ್ತು ನಿಕೊಬಾರ್ ದ್ವೀಪದಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.0  ಎಂದು ದಾಖಲಾಗಿದೆ. 


COMMERCIAL BREAK
SCROLL TO CONTINUE READING

ಬುಧವಾರ ಮುಂಜಾನೆ 5:40 ರ ಸುಮಾರಿಗೆ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ಸಂಭವಿಸಿದ 5.0 ತೀವ್ರತೆಯ ಭೂಕಂಪವು ನಿಕೋಬಾರ್ ದ್ವೀಪಗಳನ್ನು ತಲ್ಲಣಗೊಳಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ವರದಿ ಮಾಡಿದೆ.


ಇದನ್ನೂ ಓದಿ- ಓಣಂ ಪ್ರಯುಕ್ತ ಕೊಚುವೇಲಿ-ಬೆಂಗಳೂರು ನಡುವೆ ವಿಶೇಷ ರೈಲು ಆರಂಭ: ದಕ್ಷಿಣ ರೈಲ್ವೆ ನಿರ್ಧಾರ


ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS), ನಿಕೋಬಾರ್ ದ್ವೀಪದ ಅಕ್ಷಾಂಶ: 9.32 ಮತ್ತು ರೇಖಾಂಶ: 94.03ರ ನಡುವೆ 10 ಕಿಮೀ ಆಳದಲ್ಲಿ ಭೂಕಂಪದ ಅಧಿಕೇಂದ್ರವು ಪತ್ತೆಯಾಗಿದೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಇನ್ನೂ ಈ ಗಃಟನೆಯಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ, ಆಸ್ತಿ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. 


ಇದನ್ನೂ ಓದಿ- Rain Alert: ಈ ಭಾಗಗಳಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ-ಹಲವೆಡೆ ಸಿಡಿಲು ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ


ಐದು ದಿನಗಳಲ್ಲಿ ಎರಡನೇ ಭೂಕಂಪ: 
ಐದು ದಿನಗಳ ಹಿಂದೆಯಷ್ಟೆ ಜುಲೈ 29 ರ ಬೆಳಿಗ್ಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಂಭವಿಸಿದ್ದ ರಿಕ್ಟರ್ ಮಾಪಕದಲ್ಲಿ 5.8ತೀವ್ರತೆಯ ಭೂಕಂಪವು ಇಲ್ಲಿನ ಜನರನ್ನು ಬೆಚ್ಚಿಬೀಳಿಸಿತ್ತು. ಇಲ್ಲಿನ ಸ್ಥಳೀಯ ಕಾಲಮಾನ ಮಧ್ಯರಾತ್ರಿ 12:53ರ ಸುಮಾರಿಗೆ ಪೋರ್ಟ್ ಬ್ಲೇರ್‌ನಿಂದ ಸರಿಸುಮಾರು 126 ಕಿಮೀ ಆಗ್ನೇಯಕ್ಕೆ ಈ ಭೂಕಂಪ ಸಂಭವಿಸಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.