`ಮಹಾ` ಕೃಷಿ ಬಿಕ್ಕಟ್ಟು : ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಶರದ್ ಪವಾರ್ ಮನವಿ
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಹಾರಾಷ್ಟ್ರದಲ್ಲಿ ರೈತರ ಸಂಕಷ್ಟದ ಬಗ್ಗೆ ತಿಳಿಸಿದರು ಮತ್ತು ಬೆಳೆ ಹಾನಿ ಮತ್ತು ರಾಜ್ಯದಲ್ಲಿ ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರ ತುರ್ತು ಮಧ್ಯಸ್ಥಿಕೆಗೆ ಕೋರಿದರು.
ನವದೆಹಲಿ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಹಾರಾಷ್ಟ್ರದಲ್ಲಿ ರೈತರ ಸಂಕಷ್ಟದ ಬಗ್ಗೆ ತಿಳಿಸಿದರು ಮತ್ತು ಬೆಳೆ ಹಾನಿ ಮತ್ತು ರಾಜ್ಯದಲ್ಲಿ ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರ ತುರ್ತು ಮಧ್ಯಸ್ಥಿಕೆಗೆ ಕೋರಿದರು.
ಈಗ ಪವಾರ್ ಭೇಟಿ ಮಹಾರಾಷ್ಟ್ರದಲ್ಲಿ ರಾಜಕೀಯ ಅನಿಶ್ಚಿತತೆಯ ಮಧ್ಯ ನಡೆದಿರುವುದು ಹಲವರ ಹುಬ್ಬೇರಿಸಿದೆ. ಮೂರು ಪುಟಗಳ ಈ ಮನವಿ ಪತ್ರದಲ್ಲಿ ಪವಾರ್ ಅವರು ನಾಸಿಕ್ ಜಿಲ್ಲೆಯ ಬೆಳೆಗಳಾದ ಸೋಯಾಬೀನ್, ಭತ್ತ, ಟೊಮೆಟೊ ಮತ್ತು ಈರುಳ್ಳಿಯಂತಹ ತರಕಾರಿಗಳು ಕೊಯ್ಲು ಹಂತದಲ್ಲಿವೆ ಆದರೆ ನಿರಂತರ ಮಳೆಯು ಅವುಗಳನ್ನು ಸಂಪೂರ್ಣವಾಗಿ ಹಾಳು ಮಾಡಿದೆ ಎಂದು ಪ್ರಸ್ತಾಪಿಸಿದ್ದಾರೆ.
ಕಳೆದ 10 ತಿಂಗಳಲ್ಲಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಾಸಿಕ್‌ನ 44 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗ್ಪುರದಲ್ಲಿ, ಅಕಾಲಿಕ ಮಳೆಯಿಂದಾಗಿ 35,000 ಹೆಕ್ಟೇರ್‌ಗಿಂತಲೂ ಹೆಚ್ಚು ಹತ್ತಿ ಬೆಳೆಗಳು ಹಾನಿಗೀಡಾಗಿವೆ ಎಂದು ಪವಾರ್ ಹೇಳಿದರು. "ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತದಿಂದಾಗಿ, ನಿಮ್ಮ ತುರ್ತು ಮಧ್ಯಸ್ಥಿಕೆ ಹೆಚ್ಚು ಅವಶ್ಯಕವಾಗಿದೆ. ತೊಂದರೆಗೀಡಾದ ರೈತರನ್ನು ಸುಧಾರಿಸಲು ಪರಿಹಾರ ಕ್ರಮಗಳನ್ನು ಪ್ರಾರಂಭಿಸಲು ನೀವು ತಕ್ಷಣ ಕ್ರಮಗಳನ್ನು ಕೈಗೊಂಡರೆ ನಾನು ಕೃತಜ್ಞನಾಗಿದ್ದೇನೆ" ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.