ಮುಂಬೈ: ಕೊರೆಗಾಂವ್-ಭೀಮಾ ಯುದ್ಧದ 200ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಉಂಟಾದ ಹಿಂಸಾಚಾರವನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಹಿನ್ನೆಲೆಯಲ್ಲಿ ಇಂದು ಮಹಾರಾಷ್ಟ್ರ ಬಂದ್ಗೆ ಕರೆ ನೀಡಲಾಗಿದೆ. ಇಂದು ನಡೆಯುತ್ತಿರುವ ಈ ಬಂದ್ ಜನಸಾಮಾನ್ಯರ ಜೀವನದ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ಕೊರೆಗಾಂವ್-ಭೀಮಾ ಹಿಂಸಾಚಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಎಸಿ ರೈಲು ಸೇವೆಗಳನ್ನು ಬುಧವಾರ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಎಲ್ಫನ್ಸ್ಟೋನ್ ರಸ್ತೆ, ಗೋರೆಗಾಂವ್, ದಾದರ್, ಮಲಾದ್ನಲ್ಲಿನ ಇತರ ಉಪನಗರದ ಸೇವೆಗಳ ಮಧ್ಯೆ ಪ್ರತಿಭಟನೆ ನಡೆಯುತ್ತಿದೆ. ದೂರ ಪ್ರಯಾಣದ ರೈಲುಗಳನ್ನು ರದ್ದು ಮಾಡಲಾಗಿಲ್ಲ ಎಂದು ವರದಿಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಪ್ರತಿಭಟನೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ಕನಿಷ್ಠ 48 ಬಸ್ಗಳು ಹಾನಿಗೊಳಗಾಗಿದ್ದು, ನಾಲ್ಕು ಚಾಲಕರು ಗಾಯಗೊಂಡಿದ್ದಾರೆ. ಈವರೆಗೆ 150 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.