ಮಹಾರಾಷ್ಟ್ರ: ಮಕ್ಕಳ ಅಪಹರಣ ವದಂತಿ ಐವರ ಹತ್ಯೆ
ಈ ಪ್ರದೇಶದಲ್ಲಿ ಮಕ್ಕಳ ಕಳ್ಳರು ಗ್ಯಾಂಗ್ ಸಕ್ರಿಯರಾಗಿದ್ದಾರೆ ಎಂಬ ವದಂತಿಗಳು ವಂದಂತಿ ಹಿನ್ನೆಲೆಯಲ್ಲಿ ಜನರು ಬಲಿಯಾಗುತ್ತಿದ್ದಾರೆ.
ಮುಂಬಯಿ: ಸಾರ್ವಜನಿಕರಿಂದ ಥಳಿತಕ್ಕೊಳಗಾಗಿ ಅಮಾಯಕರು ಹತ್ಯೆಯಾಗುತ್ತಿರುವ ಘಟನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ವಿಶೇಷವಾಗಿ ಮಕ್ಕಳ ಕಳ್ಳತನದ ವದಂತಿಯು ಕೆಲವು ಜನರನ್ನು ಕೊಂದಿದೆ. ಇತ್ತೀಚಿನ ಪ್ರಕರಣದಲ್ಲಿ, ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ, ಗ್ರಾಮಸ್ಥರು ಭಾನುವಾರದಂದು ಮಕ್ಕಳ ಕಳ್ಳರೆಂದು ಶಂಕಿಸಿ ಐವರನ್ನು ಹತ್ಯೆ ಮಾಡಿದ್ದಾರೆ. ಸತ್ತವರಲ್ಲಿ ಒಬ್ಬರು ಸೋಲಾಪುರ ಜಿಲ್ಲೆಯ ಮಂಗಲ್ವೇದ ಪಟ್ಟಣ ನಿವಾಸಿಯಾಗಿದ್ದಾರೆ.
ರೆನ್ಪಾಡಾ ಪ್ರದೇಶದಲ್ಲಿ ರಾಜ್ಯ ಸಾರಿಗೆ ಬಸ್ನಿಂದ ಈ ಐದು ಜನರು ಇಳಿಯುವುದನ್ನು ನೋಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಒಬ್ಬರು ಹುಡುಗಿಯೊಡನೆ ಮಾತನಾಡಲು ಪ್ರಯತ್ನಿಸಿದಾಗ, ಭಾನುವಾರದ ಮಾರುಕಟ್ಟೆಯಲ್ಲಿ ನೆರೆದಿದ್ದವರು ಅವರನ್ನು ಹೊಡೆಯಲು ಪ್ರಾರಂಭಿಸಿದರು ಎಂದು ಪೊಲೀಸರು ಹೇಳಿದರು.
ಸಾರ್ವಜನಿಕರು ನಡೆಸಿದ ಈ ದಾಳಿಯಲ್ಲಿ ಐದು ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಮಕ್ಕಳ ಕಳ್ಳರು ಸಕ್ರಿಯರಾಗಿದ್ದಾರೆ ಎಂಬ ವದಂತಿ ಹಿನ್ನಲೆಯಲ್ಲಿ ಇಂತಹ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹಗಳನ್ನು ಹತ್ತಿರದ ಪಿಂಪ್ಪ್ಲಾನರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತರಲ್ಲಿ ಓರ್ವ ವ್ಯಕ್ತಿಯನ್ನು ಸೋಲಾಪುರ ಜಿಲ್ಲೆಯ ಮಂಗಲ್ವೇದದ ನಿವಾಸಿ ಎಂದು ಗುರುತಿಸಲಾಗಿದೆ. ಇನ್ನುಳಿದವರನ್ನು ಗುರುತಿಸಲಾಗಿಲ್ಲ. ಹಲ್ಲೆ ನಡೆದ ಸಂದರ್ಭದಲ್ಲಿ ಕೆಲವರು ವಿಡಿಯೋ ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಅವುಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸಲಾಗುವುದು ಎಂದು ಪೊಲೀಸರು ತಿಳಿಸಿದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸಚಿವ ದೀಪಕ್ ಕಿಸಾರ್ಕರ್ ಹೇಳಿದ್ದಾರೆ. ಮಕ್ಕಳ ಕಳ್ಳತನದಂತಹ ವದಂತಿಗಳನ್ನು ದುರ್ಬಳಕೆ ಮಾಡಬಾರದು ಅಥವಾ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು ಎಂದು ಸಚಿವರು ಜನರಿಗೆ ಮನವಿ ಮಾಡಿದ್ದಾರೆ.