ಶಿವಸೇನೆಗೆ ಸಿಎಂ ಪಟ್ಟ: ಸಂಜಯ್ ರೌತ್
ಮಹಾರಾಷ್ಟ್ರದ ರಾಜಕೀಯ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ. ಏತನ್ಮಧ್ಯೆ, ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಮಾತನಾಡಿರುವ ಶಿವಸೇನೆಯ ಸಂಜಯ್ ರೌತ್, ನೀವು `ಹಂಗಾಮ` ಎಂದು ಕರೆಯುತ್ತಿರುವಿರಿ, ವಾಸ್ತವವಾಗಿ ಇದು `ಹಂಗಾಮ` ಅಲ್ಲ, ನ್ಯಾಯ ಮತ್ತು ಹಕ್ಕುಗಳ ಹೋರಾಟ. ಇದರಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ 2019ರ ಬಳಿಕ ರಾಜ್ಯದಲ್ಲಿ ಸರ್ಕಾರ ರಚನೆ ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಒಂದರ್ಥದಲ್ಲಿ ಮಹಾರಾಷ್ಟ್ರದ ರಾಜಕೀಯ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ. ಏತನ್ಮಧ್ಯೆ, ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಮಾತನಾಡಿರುವ ಶಿವಸೇನೆಯ ಸಂಜಯ್ ರೌತ್, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಶಿವಸೇನೆ ಪಕ್ಷಕ್ಕೆ ಸೇರಿದವರು ಎಂಬ ಹೇಳಿಕೆ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆಗಳನ್ನು ನೀವು 'ಹಂಗಾಮ' ಎಂದು ಕರೆಯುತ್ತಿರುವಿರಿ, ವಾಸ್ತವವಾಗಿ ಇದು 'ಹಂಗಾಮ' ಅಲ್ಲ, ನ್ಯಾಯ ಮತ್ತು ಹಕ್ಕುಗಳ ಹೋರಾಟ. ಇದರಲ್ಲಿ ನಾವು ಗೆಲ್ಲುತ್ತೇವೆ ಎಂದು ರೌತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ಸನ್ನಿವೇಶದೊಂದಿಗೆ ತಳುಕು ಹಾಕಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕವಿ ದುಶ್ಯಂತ್ ಕುಮಾರ್ ಕವಿತೆ ಹೇಳಿರುವ ಸಂಜಯ್ ರೌತ್, "ಕೇವಲ 'ಹಂಗಾಮ' ಸೃಷ್ಟಿಸುವುದು ನಮ್ಮ ಉದ್ದೇಶವಲ್ಲ. ಸೂರತ್ ಬದಲಾಗಬೇಕು ಎಂಬುದು ನನ್ನ ಪ್ರಯತ್ನ" ಎಂದು ಅವರು ತಿಳಿಸಿದ್ದಾರೆ. ಅಂದರೆ, ಈ ಮೂಲಕ ಶಿವಸೇನೆ ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಮಹಾರಾಷ್ಟ್ರದ ರಾಜಕೀಯ ನೋಟವನ್ನು ಬದಲಾಯಿಸುವುದು ಶಿವಸೇನೆಯ ಉದ್ದೇಶ ಎಂದು ರೌತ್ ಹೇಳಿದರು.
ಈ ಮೊದಲು ಎಲ್ಲವೂ ಪಾರದರ್ಶಕ ಮತ್ತು ಸ್ಪಷ್ಟವಾಗಿದೆ. ದೆಹಲಿಯ ಮಾಲಿನ್ಯ ಮಹಾರಾಷ್ಟ್ರದಲ್ಲಿ ಬರುವುದಿಲ್ಲ. ಮಹಾರಾಷ್ಟ್ರದ ನಿರ್ಧಾರ ಮಹಾರಾಷ್ಟ್ರದಲ್ಲಿದೆ. ಅದನ್ನು ಉದ್ಧವ್ ಠಾಕ್ರೆ ನಿರ್ಧರಿಸುತ್ತಾರೆ ಎಂದು ಸಂಜಯ್ ರೌತ್ ಹೇಳಿಕೆ ನೀಡಿದ್ದರು.
ಶಿವಸೇನೆ ಮತ್ತು ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಸರ್ಕಾರ ರಚಿಸುವುದರೊಂದಿಗೆ, ಕಾಂಗ್ರೆಸ್ ಹೊರಗಿನಿಂದ ಬೆಂಬಲ ನೀಡುತ್ತದೆಯೇ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಊಹಾಪೋಹಗಳು ಕೇಳಿಬರುತ್ತಿವೆ? ಈ ಬಗ್ಗೆ ಏನು ಹೇಳುತ್ತೀರಿ ಎಂದು ಸಂಜಯ್ ರೌತ್ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಇದು ಸಂಪೂರ್ಣವಾಗಿ ತಪ್ಪು ಮಾಹಿತಿ ಎಂದು ಹೇಳಿದರು. ಶರದ್ ಪವಾರ್ ಅವರು ದೇಶದ ಮೇರು ನಾಯಕ, ಅವರ ವಿರುದ್ಧದ ವದಂತಿಗಳನ್ನು ನಿಲ್ಲಿಸಿ. ಎನ್‌ಸಿಪಿಗೆ ಶಿವಸೇನೆ ಬೆಂಬಲ ಮತ್ತು ಹೊರಗಿನಿಂದ ಕಾಂಗ್ರೆಸ್ ಬೆಂಬಲ ಇದನ್ನು ಯಾರು ಹೇಳಿದರು? ರಾಜಕೀಯದಲ್ಲಿ, ವದಂತಿಗಳು ಇದ್ದದ್ದೇ… ಅವುಗಳನ್ನು ಸ್ಫೋಟಿಸುವ ಜನರೂ ಇದ್ದಾರೆ… ಒಂದೊಂದು ಮಾತು ಹಲವು ವದಂತಿಗಳನ್ನು ಸೃಷ್ಟಿಸುತ್ತವೆ ಎಂದರು.
ದೇವೇಂದ್ರ ಫಡ್ನವೀಸ್ ಶಿವಸೇನೆ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೌತ್, ಇದು ಕೇವಲ ವರದಿಗಳು. ನೀವು ಅವುಗಳನ್ನು ನೋಡಿರುವಿರೇ? ಕ್ಯಾಮೆರಾವನ್ನು ನಂಬಬೇಕು, ಊಹಾಪೋಹಗಳನ್ನು ನಂಬಬೇಡಿ ಎಂದು ಹೇಳಿದರು.