ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಆರಂಭಿಕ ಪ್ರವೃತ್ತಿಗಳ ಪ್ರಕಾರ ಮೊದಲ ಸುತ್ತಿನ ಎಣಿಕೆಯ ನಂತರ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಮುಂಬೈನ ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ 7,020 ಮತಗಳನ್ನು ಗಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಪುತ್ರರಾದ ಆದಿತ್ಯ ಠಾಕ್ರೆ ಅವರು ಪಕ್ಷದ ಇತಿಹಾಸದಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸಿದ ಕುಟುಂಬದ ಮೊದಲ ಸದಸ್ಯರಾಗಿದ್ದಾರೆ.


ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸುರೇಶ್ ಮಾನೆ, ವಾಂಚಿತ್ ಬಹುಜನ ಅಗಾದಿ (ವಿಬಿಎ)ಯ ಗೌತಮ್ ಅನ್ನಾ ಗೈಕ್ವಾಡ್ ಮತ್ತು ವರ್ಲಿ ವಿಧಾನಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ವಿಶ್ರಮ್ ತಿಡಾ ಪದಂ ವಿರುದ್ಧ ಆದಿತ್ಯ ಠಾಕ್ರೆ ಸ್ಪರ್ಧೆ ನಡೆಸಿದ್ದಾರೆ.


ಏತನ್ಮಧ್ಯೆ, ಮಹಾರಾಷ್ಟ್ರದ 21 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದರೆ, ಮಿತ್ರ ಪಕ್ಷ ಶಿವಸೇನೆ 13 ಸ್ಥಾನಗಳಲ್ಲಿ ಮುಂದಿದೆ. ಮತ್ತೊಂದೆಡೆ, ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಅದರ ಮೈತ್ರಿ ಪಕ್ಷ ಎನ್‌ಸಿಪಿ 15 ಸ್ಥಾನಗಳಲ್ಲಿ ಮುಂದಿದೆ. ಉಳಿದಂತೆ ನಾಲ್ಕು ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.


ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆ 288 ಸ್ಥಾನಗಳಿಗೆ ನಡೆದ ಮತದಾನಂದ ಮತಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, ಮಧ್ಯಾಹ್ನದೊಳಗೆ ಪೂರ್ಣ ಫಲಿತಾಂಶ ಹೊರಬೀಳಲಿದೆ.