ಮುಂಬೈ: ಮರಾಠರಿಗೆ ಮೀಸಲಾತಿ ನೀಡಬೇಕೆಂಬ ಬೇಡಿಕೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಗುರುವಾರ ಮಹಾರಾಷ್ಟ್ರ ಸರ್ಕಾರ ಹೇಳಿದ್ದು, ಸಮುದಾಯದ ಸದಸ್ಯರು ಕಾನೂನುಬದ್ಧವಾಗಿ ಮೀಸಲಾತಿ ಪಡೆಯಲಿದ್ದಾರೆ ಎಂದು ಭರವಸೆ ನೀಡಿದೆ.


COMMERCIAL BREAK
SCROLL TO CONTINUE READING

ಮರಾಠ ಮೀಸಲಾತಿಗೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಗತ್ಯ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಮರಾಠ ಸಮುದಾಯ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಪಡೆಯಲಿದ್ದಾರೆ ಎಂದು ಭರವಸೆ ನೀಡಿದರು. 


ಮಹಾರಾಷ್ಟ್ರದಲ್ಲಿ ಮತ್ತೆ ಭುಗಿಲೆದ್ದ ಮರಾಠಾ ಮೀಸಲಾತಿ ಹೋರಾಟ


ಮರಾಠರಿಗೆ ಮೀಸಲಾತಿಯನ್ನು ನೀಡುವ ಸಂಬಂಧ ಇಂದು ಬೆಳಿಗ್ಗೆ ರಾಜ್ಯದ ನಾಯಕರು, ಮರಾಠ ಆಂದೋಲನದ ಮುಖಂಡರು ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಮರಾಠರಿಗೆ ಕಾನೂನುಬದ್ಧವಾಗಿ ಮಿಸಲಾತಿ ಒದಗಿಸುವ ಜಂಟಿ ಹೇಳಿಕೆಗೆ ಸಹಿ ಹಾಕಲಾಗಿದೆ. ರಾಜ್ಯ ಸರ್ಕಾರ ಮರಾಠ ಮೀಸಲಾತಿಗೆ ಸಂಪೂರ್ಣ ಬೆಂಬಲ ನೀಡಲಿದೆ. ಆದಷ್ಟು ಬೇಗ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.


ಹಿಂಸಾಚಾರಕ್ಕೆ ತಿರುಗಿದ ಮರಾಠ ಮೀಸಲಾತಿ ಹೋರಾಟ, ನಿಷೇಧಾಜ್ಞೆ ಜಾರಿ


ಮರಾಠರಿಗೆ ಮೀಸಲಾತಿ ಒದಗಿಸುವಂತೆ ಒತ್ತಾಯಿಸಿ ಮುಂಬೈನಲ್ಲಿ ಮರಾಠಾ ಕಾರ್ಯಕರ್ತರು 'ಜೈಲಿ ಭೋರೋ' ಪ್ರತಿಭಟನೆಯನ್ನು ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿಗಳು ಮರಾಠರಿಗೆ ಮಿಸಲಾತಿ ಒದಗಿಸುವ ಭರವಸೆ ನೀಡಿದ್ದಾರೆ.