ನವದೆಹಲಿ: ಮಹಾರಾಷ್ಟ್ರ ಸರ್ಕಾರ ಜುಲೈ 31 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಅವಧಿಯನ್ನು ವಿಸ್ತರಿಸಿದೆ. ಈ ಹಿಂದೆ ಲಾಕ್‌ಡೌನ್ ಅನ್ನು ರಾಜ್ಯದಿಂದ ತೆಗೆದುಹಾಕಲಾಗುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟವಾಗಿ ಹೇಳಿದ್ದರು. ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂದು ಅವರು ಹೇಳಿದ್ದರು. ಈ ಕಾರಣಕ್ಕಾಗಿ ಜೂನ್ 30 ರಂದು ಲಾಕ್‌ಡೌನ್ ಅನ್ನು ತೆಗೆದುಹಾಕಲಾಗುವುದಿಲ್ಲ ಮತ್ತ್ತು ಲಾಕ್ ಡೌನ್ ಕ್ರಮೇಣ ಸಡಿಲಗೊಳಿಸಲಾಗುವುದು ಎಂದು ಅವರು ಹೇಳಿದ್ದರು.


COMMERCIAL BREAK
SCROLL TO CONTINUE READING

ಕೊರೊನಾ ನಿಯಂತ್ರಣಕ್ಕೆ ಕೆಲ ಅನಾವಶ್ಯಕ ಚಟುವಟಿಕೆಗಳ ಮೇಲೆ ಅಗತ್ಯ ನಿರ್ಬಂಧನೆಗಳನ್ನು ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ರಾಜ್ಯದ ಮಹಾನಗರ ಪಾಲಿಕೆಗಳು, ಜಿಲ್ಲಾಧಿಕಾರಿಗಳು ಮತ್ತು ಆಯುಕ್ತರಿಗೆ ನಿರ್ದೇಶನ ನೀಡಿದೆ.


ಅಷ್ಟೇ ಅಲ್ಲ, ನಾವು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದು ಸಿಎಂ ಠಾಕ್ರೆ ಹೇಳಿದ್ದರು. ಅವರು ನಮಗಾಗಿ ಹೋರಾಡುತ್ತಿದ್ದಾರೆ, ನಾನು ಅವರಿಗೆ ನನ್ನ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ಕರೋನಾ ವೈರಸ್ ಇನ್ನೂ ಮುಗಿದಿಲ್ಲ, ನಾವು ಈ ಸಮಸ್ಯೆಯ ವಿರುದ್ಧ ಒಟ್ಟಾಗಿ ಹೋರಾಡುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ  ನಾವು ತಾಳ್ಮೆಯನ್ನು ಕಳೆದುಕೊಳ್ಳಬಾರದು ಮತ್ತು ಅನಗತ್ಯವಾಗಿ ಹೊರಗೆ ಹೋಗಬಾರದು ಎಂದು ಹೇಳಿದ್ದಾರೆ.


ಮಹಾರಾಷ್ಟ್ರದಲ್ಲಿ ಕರೋನಾ ಸೋಂಕಿತರ ಸಂಖ್ಯೆ 1,64,626
ಜಾಗತಿಕ ಮಹಾಮಾರಿ ಕರೋನಾ ವೈರಸ್ (ಕೋವಿಡ್ -19) ನಿಂದ ಮಹಾರಾಷ್ಟ್ರ ರಾಜ್ಯ, ದೆಹಲಿ ಮತ್ತು ತಮಿಳುನಾಡಿನಲ್ಲಿ ಸ್ಥಿತಿ ಭಯಹುಟ್ಟಿಸುವಂತಿದೆ. ಈ ಮೂರು ರಾಜ್ಯಗಳಲ್ಲಿ 329,978 ಜನರು ಕರೋನಾದಿಂದ ಬಳಲುತ್ತಿದ್ದಾರೆ, ಇದು ದೇಶಾದ್ಯಂತ ಈ ಮಾರಕ ಸೋಂಕಿಗೆ ಗುರಿಯಾದವರ ಸಂಖ್ಯೆಯ ಒಟ್ಟು ಶೇ 60.18 ರಷ್ಟು ಆಗಿದೆ. ಒಂದೆಡೆ ಮಹಾರಾಷ್ಟ್ರದಲ್ಲಿ ಒಟ್ಟು  ಕೋವಿಡ್ -19 ಸೋಂಕಿತರ ಸಂಖ್ಯೆ 164,626 ತಲುಪಿದ್ದಾರೆ, ದೆಹಲಿಯಲ್ಲಿ ಇದುವರೆಗೆ 83,077 ಜನರು ಮತ್ತು ತಮಿಳುನಾಡಿನಲ್ಲಿ ಒಟ್ಟು 82,275 ಜನರು ಸೋಂಕಿಗೆ ಒಳಗಾಗಿದ್ದಾರೆ.


ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 19,459 ಹೊಸ ಕರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ ಹಾಗೂ ಒಟ್ಟು ಸೋಂಕಿತರ ಸಂಖ್ಯೆ 548,318 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ  ಈ ಸಾಂಕ್ರಾಮಿಕ ರೋಗದಿಂದ ಇಲ್ಲಿಯವರೆಗೆ ಒಟ್ಟು 16475 ಜನರು ಸಾವನ್ನಪ್ಪಿದ್ದಾರೆ ಮತ್ತು 321723 ಜನರು ಈ ಕಾಯಿಲೆಯಿಂದ ಗುಣಮುಖರಾಗಿ ತಮ್ಮ ಮನೆಗೆ ಮರಳಿದ್ದಾರೆ. ಪ್ರಸ್ತುತ ದೇಶಾದ್ಯಂತ ಒಟ್ಟು 210,120 ಸಕ್ರಿಯ ಪ್ರಕರಣಗಳು ಇವೆ ಎಂಬುದು ಇಲ್ಲಿ ಉಲ್ಲೇಖನೀಯ.