ನವದೆಹಲಿ: ಶರದ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (NCP) ಮತ್ತು ಕಾಂಗ್ರೆಸ್(Congress) ಜೊತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆ(Shiv Sena) ಜಾತ್ಯತೀತತೆಯ ಬಗ್ಗೆ ತನ್ನ ನಿಲುವನ್ನು ಮೃದುಗೊಳಿಸಿದೆ ಎಂದು ತೋರುತ್ತದೆ. ಜಾತ್ಯತೀತತೆಯ ಬಗ್ಗೆ ಪಕ್ಷದ ನಿಲುವಿನ ಬಗ್ಗೆ ಕೇಳಿದಾಗ, ಹಿರಿಯ ಶಿವಸೇನೆ ಮುಖಂಡ ಸಂಜಯ್ ರೌತ್ ಅವರು ರಾಷ್ಟ್ರದ ಸಂವಿಧಾನದ ಪ್ರಸ್ತಾವನೆಯಲ್ಲಿ 'ಜಾತ್ಯತೀತ' ಎಂಬ ಪದವಿದೆ ಮತ್ತು ನಾವು ಸಂವಿಧಾನವನ್ನು ಅನುಸರಿಸುತ್ತೇವೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

"ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ 'ಜಾತ್ಯತೀತ' ಎಂಬ ಪದವಿದೆ. ಶಿವಸೇನೆ ಸಂವಿಧಾನವನ್ನು ಅನುಸರಿಸುತ್ತದೆ. ಎಲ್ಲಾ ರೈತರು ಮತ್ತು ಸಾಮಾನ್ಯ ಜನರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಸಹಾಯ ನೀಡಬೇಕು. ಶಿವಾಜಿ ಮಹಾರಾಜ್ ಅವರು ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸುವ ಮೂಲಕ ತಮ್ಮ ರಾಜ್ಯವನ್ನು ಮಾಡಿದರು" ಎಂದು ಶಿವಸೇನೆ ನಾಯಕ ಸಂಜಯ್ ರೌತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿಯ ನಿರೀಕ್ಷಿತ ಮೈತ್ರಿಗಾಗಿ ವಿನ್ಯಾಸಗೊಳಿಸಲಾದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ (ಸಿಎಂಪಿ) 'ಜಾತ್ಯತೀತತೆ' ತತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.


ಮೈತ್ರಿಗಾಗಿ ಒಪ್ಪಂದ ಮಾಡಿಕೊಳ್ಳುವ ಮೊದಲು, ಕಾಂಗ್ರೆಸ್ ತನ್ನ ಹಿಂದೂತ್ವ ರಾಜಕಾರಣವನ್ನು ಬಿಡಲು ಬುಧವಾರ ಶಿವಸೇನೆಯ ಮುಂದೆ ಷರತ್ತು ವಿಧಿಸಿತ್ತು, ಸಿಎಂಪಿ ಅಡಿಯಲ್ಲಿ ಜಾತ್ಯತೀತತೆಯ ಬಗ್ಗೆ ಸೇನಾ ನಿಲುವನ್ನು ಉಳಿಸಿಕೊಳ್ಳಲು ಪವಾರ್ ಅವರು ಉದ್ಧವ್ ಠಾಕ್ರೆ ಅವರನ್ನು ಕೇಳಿದ್ದರು, ಇದಕ್ಕೆ ಪಕ್ಷದ ಮುಖ್ಯಸ್ಥರು ಸಮ್ಮತಿಸಿದರು ಎನ್ನಲಾಗಿದೆ.


ಈ ತಿಂಗಳ ಆರಂಭದಲ್ಲಿ, ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗಿನ ಮಾತುಕತೆ ಇದ್ದಿದ್ದರಿಂದ ಉದ್ಧವ್ ಠಾಕ್ರೆ ತಮ್ಮ ಪೂರ್ವ ನಿಯೋಜಿತ ಅಯೋಧ್ಯೆಯ ಭೇಟಿಯನ್ನು ಮುಂದೂಡಿದರು.


ಶಿವಸೇನೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗಿನ ಸಹಭಾಗಿತ್ವವನ್ನು ಮುರಿದ ನಂತರ, ಪ್ರಸ್ತುತ ರಾಷ್ಟ್ರಪತಿಗಳ ಆಳ್ವಿಕೆ ಇರುವ ಮಹಾರಾಷ್ಟ್ರದಲ್ಲಿ ಬಿಜೆಪಿ ಅಲ್ಲದ ಸರ್ಕಾರವನ್ನು ಹೊಂದಲು ಮುಂದಾಗಿದೆ. ನಿರಂತರ ಸಭೆ ಮತ್ತು ಸಮಾಲೋಚನೆಗಾ ಬಳಿಕ ರಾಜ್ಯದಲ್ಲಿ ಸರ್ಕಾರ ರಚಿಸುವಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಶಿವಸೇನೆಗೆ ಬೆಂಬಲ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಬುಧವಾರ ತಿಳಿದುಬಂದಿದೆ.


ಮೂಲಗಳ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ಅಧಿಕೃತ ಪ್ರಕಟಣೆ ಬರುವ ಸಾಧ್ಯತೆಯಿದೆ. ಏಕೆಂದರೆ ಎಲ್ಲಾ ಮೂರು ಪಕ್ಷಗಳು ಅಧಿಕಾರ ಹಂಚಿಕೆ ಕುರಿತು ತಮ್ಮ ಸೂತ್ರವನ್ನು ಬಹುತೇಕ ಅಂತಿಮಗೊಳಿಸಿವೆ. ಉದ್ಧವ್ ಅವರು ಶುಕ್ರವಾರ ತಮ್ಮ ಮುಂಬೈ ನಿವಾಸದಲ್ಲಿ ಎಲ್ಲಾ ಶಿವಸೇನೆ ಶಾಸಕರು ಮತ್ತು ಪಕ್ಷದ ಹಿರಿಯ ಮುಖಂಡರ ಸಭೆಯನ್ನು ಕರೆದಿದ್ದಾರೆ, ಇದರಲ್ಲಿ ಅವರು ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ವಿವರಿಸುವ ಸಾಧ್ಯತೆಯಿದೆ. ಮತ್ತೊಂದೆಡೆ, ಪವಾರ್ ಇಂದು ಸೇನಾ ಮುಖಂಡರನ್ನು ಭೇಟಿಯಾಗಲಿದ್ದಾರೆ. 


ಉದ್ಧವ್ ಮಹಾರಾಷ್ಟ್ರ ಸಿಎಂ ಆಗುತ್ತಾರೆಯೇ ಎಂಬ ಮಾಧ್ಯಮ ಮಿತ್ರರ ಪ್ರಶ್ನೆಗೆ ನೇರವಾಗಿ ಪ್ರತಿಕ್ರಿಯಿಸದ ಸಂಜಯ್ ರೌತ್, "ಜನರ ಇಚ್ಚೆಯಂತೆ ಸೇನಾ ಮುಖ್ಯಮಂತ್ರಿ ಇರುತ್ತಾರೆ ಎಂದಷ್ಟೇ ನಾನು ಹೇಳಬಲ್ಲೆ" ಎಂದರು.