ನವದೆಹಲಿ:  ಮಹಾರಾಷ್ಟ್ರದಲ್ಲಿ  COVID-19 ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 101141 ಕ್ಕೆ ತಲುಪಿದ ಮೊದಲ ರಾಜ್ಯ ಎನ್ನುವ ಕುಖ್ಯಾತಿಗೆ ಒಳಗಾಗಿದೆ. 


COMMERCIAL BREAK
SCROLL TO CONTINUE READING

ಕಳೆದ 24 ಗಂಟೆಗಳಲ್ಲಿ 129 ಸಾವುಗಳೊಂದಿಗೆ 3493 ಹೊಸ ಪ್ರಕರಣಗಳು ದಾಖಲಾಗಿವೆ.ರಾಜ್ಯದಲ್ಲಿ ಈಗ ಸಾವಿನ ಸಂಖ್ಯೆ 3717 ಆಗಿದೆ.ಈವರೆಗೆ ರಾಜ್ಯದಲ್ಲಿ 47796 ರೋಗಿಗಳನ್ನು ಗುಣಮುಖರಾದ ನಂತರ ಬಿಡುಗಡೆ ಮಾಡಲಾಗಿದೆ.


ಇದನ್ನೂ ಓದಿ: ಕೊರೊನಾ ಪ್ರಕರಣಗಳಲ್ಲಿ ಚೀನಾ ದೇಶವನ್ನು ಹಿಂದಿಕ್ಕಿದ ಮಹಾರಾಷ್ಟ್ರ...!


ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ, ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ಅವರಿಗೆ ಕೊರೊನಾ ಸೋಂಕು ತಗುಲಿದ್ದು,ಆ ಮೂಲಕ ಸೋಂಕು ತಗುಲಿದ ಮೂರನೇ ಮಹಾರಾಷ್ಟ್ರದ ಸಚಿವರಾಗಿದ್ದಾರೆ. ಅವರು ಎರಡು ದಿನಗಳ ಹಿಂದೆ ಎನ್ಸಿಪಿ ಕಾರ್ಯಕ್ರಮದಲ್ಲಿ ಹಾಗೂ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು.


ಇದಕ್ಕೂ ಮೊದಲು ಜಿತೇಂದ್ರ ಅವಾದ್ ಹಾಗೂ ಅಶೋಕ್ ಚವಾಣ್ ಅವರು ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದರು.ಆದರೆ ಈಗ ಇಬ್ಬರು ಗುಣಮುಖರಾಗಿದ್ದಾರೆ.