Ajit Pawar Property Attaches: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನೀಲ್ (Former Maharashtra Home Minister Anil Deshmukh) ದೇಶ್ಮುಖ್ ಅವರ ಬಂಧನದ ಬಳಿಕ ಇದೀಗ ಮಹಾರಾಷ್ಟ್ರ ಸರ್ಕಾರದ ಉಪಮುಖಮಂತ್ರಿ ಅಜಿತ್ ಪವಾರ್ ಮೇಲೆ ಆಕ್ಷನ್ ಆರಂಭಗೊಂಡಿದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಅಜಿತ್ ಪವಾರ್ (Ajit Pawar) ಅವರಿಗೆ ಸೇರಿದೆ ಎನ್ನಲಾದ ಸುಮಾರು ಒಂದು ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿದೆ.


COMMERCIAL BREAK
SCROLL TO CONTINUE READING

ವಶಕ್ಕೆ ಪಡೆಯಳಾಗಿರುವ ಆಸ್ತಿಗಳಲ್ಲಿ ದಕ್ಷಿಣ ದೆಹಲಿಯಲ್ಲಿರುವ ಸುಮಾರು 20 ಕೋಟಿ ಮೌಲ್ಯದ ಫ್ಲಾಟ್ ಸೇರಿದೆ. ನಿರ್ಮಲ್ ಹೌಸ್‌ನಲ್ಲಿರುವ ಪಾರ್ಥ್ ಪವಾರ್ ಅವರ ಕಚೇರಿಯ ವೆಚ್ಚ ಸುಮಾರು 25 ಕೋಟಿ. ಜಾರಂದೇಶ್ವರ ಸಕ್ಕರೆ ಕಾರ್ಖಾನೆ ಸುಮಾರು 600 ಕೋಟಿ ರೂ. ಇದಲ್ಲದೇ ಗೋವಾದಲ್ಲಿ ನಿಲಯ ಎಂಬ ರೆಸಾರ್ಟ್ 250 ಕೋಟಿ ರೂ. ಶಾಮೀಲಾಗಿವೆ. ಜಪ್ತಿ ಮಾಡಿರುವ ಆಸ್ತಿ ಬೇನಾಮಿ (Benami Property) ಹಣದಿಂದ ಖರೀದಿಸಿಲ್ಲ ಎಂದು ಸಾಬೀತುಪಡಿಸಲು ಅಜಿತ್ ಪವಾರ್ ಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ. 


ಆದಾಯ ತೆರಿಗೆ ಇಲಾಖೆಯು (IT Department) ಕಳೆದ ತಿಂಗಳು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Maharahstra Deputy CM Ajit Pawar) ಮತ್ತು ಇತರರಿಗೆ ಸಂಬಂಧಿಸಿದ ಕನಿಷ್ಠ 70 ನಿವೇಶನಗಳ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಸುಮಾರು 184 ಕೋಟಿ ರೂ.ಗಳ ಲೆಕ್ಕಕ್ಕೆ ಸಿಗದ ಆದಾಯದ ಪುರಾವೆಗಳು ಪತ್ತೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು. ದಾಳಿಯಲ್ಲಿ ಲೆಕ್ಕಕ್ಕೆ ಸಿಗದ 2.13 ಕೋಟಿ ರೂಪಾಯಿ ನಗದು ಮತ್ತು 4.32 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.


ಇದನ್ನೂ ಓದಿ-Karnataka Assembly Bypolls Results : ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ, ಸಿದ್ದರಾಮಯ್ಯ ನಿವಾಸದಲ್ಲಿ ಕಾರ್ಯಕರ್ತರ ಸಂಭ್ರಮ


12 ಗಂಟೆಗಳ ವಿಚಾರಣೆಯ ನಂತರ ಅನಿಲ್ ದೇಶಮುಖ್ ಅವರನ್ನು ಇಡಿ ಬಂಧಿಸಿದೆ
ಇದಕ್ಕೂ ಮುನ್ನ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು 12 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ತಡರಾತ್ರಿ ಅವರನ್ನು ಬಂಧಿಸಿದೆ. ಈ ಮನಿ ಲಾಂಡರಿಂಗ್ ಪ್ರಕರಣವು ಮಹಾರಾಷ್ಟ್ರ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್‌ನಲ್ಲಿರುವ ಸುಲಿಗೆ ಗ್ಯಾಂಗ್‌ಗೆ ಸಂಬಂಧಿಸಿದೆ. ದೇಶಮುಖ್ (71) ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಹಿರಿಯ ನಾಯಕ ದೇಶಮುಖ್ (Anil Deshmukh) ಅವರು ತಮ್ಮ ವಿಚಾರಣೆಯ ಸಮಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 


ಇದನ್ನೂ ಓದಿ-ಸಿಂದಗಿಯಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ, ಹಾನಗಲ್ ನಲ್ಲಿ ಕಾಂಗ್ರೆಸ್ ಮುನ್ನಡೆ


ಈ ಪ್ರಕರಣದಲ್ಲಿ ಇಡಿ ನೀಡಿದ್ದ ಸಮನ್ಸ್ ಗಳಲ್ಲಿ ಐದು ಸಮನ್ಸ್ ಗಳಿಗೆ ದೇಶಮುಖ್ ಹಾಜರಾಗಲಿಲ್ಲ, ಆದರೆ ಕಳೆದ ವಾರ ಬಾಂಬೆ ಹೈಕೋರ್ಟ್ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ನಂತರ ಏಜೆನ್ಸಿಯ ಮುಂದೆ ಅವರು ಹಾಜರಾಗಿದ್ದರು.


ಇದನ್ನೂ ಓದಿ-Interesting Facts: ಯಾವ ರಾಜ್ಯದ ಜನರು ಹೆಚ್ಚು ಪ್ರವಾಸಕ್ಕೆ ತೆರಳುತ್ತಿದ್ದಾರೆ? ಉತ್ತರ ಕೇಳಿ ನೀವೂ ನಿಬ್ಬೇರಗಾಗುವಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ