ಮಹಾರಾಷ್ಟ್ರದ ಅಮರಾವತಿಯಲ್ಲಿ ದೋಣಿ ಮಗುಚಿ 11 ಮಂದಿ ಸಾವು
ದೋಣಿಯಲ್ಲಿ ಕುಳಿತಿದ್ದ ಜನರು ವಿಹಾರಕ್ಕೆಂದು ಬಂದಿದ್ದರು ಎನ್ನಲಾಗಿದೆ. ದೋಣಿಯಲ್ಲಿ ಕುಳಿತಿದ್ದ ಬೇಳೆ ಬ್ಯಾಲೆನ್ಸ ತಪ್ಪಿ ದೋಣಿ ಮಗುಚಿ ಬಿದ್ದಿದೆ. ಇನ್ನೂ ದೋಣಿಯಲ್ಲಿದ್ದವರ ಗುರುತು ಪತ್ತೆಯಾಗಿಲ್ಲ.
ಅಮರಾವತಿ: ಮಹಾರಾಷ್ಟ್ರದ ಅಮರಾವತಿಯಲ್ಲಿ (Amarawati) ಭಾರೀ ದುರಂತ ಸಂಭವಿಸಿದೆ. ವಾರ್ಧಾ ನದಿಯಲ್ಲಿ (wardha river) ದೋಣಿ ಮಗುಚಿ 11 ಜನರು ಮೃತಪಟ್ಟಿದ್ದಾರೆ. ಅಪಘಾತದ ನಂತರ, ಮೂರು ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಎಂಟು ಜನರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆದೆ. ಅಮರಾವತಿಯ ಗಲ್ಲೇಗಾಂವ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಸ್ಥಳಕ್ಕೆ ಶಾಸಕರ ಭೇಟಿ :
ದೋಣಿಯಲ್ಲಿ (Boat accident)ಕುಳಿತಿದ್ದ ಜನರು ವಿಹಾರಕ್ಕೆಂದು ಬಂದಿದ್ದರು ಎನ್ನಲಾಗಿದೆ. ದೋಣಿಯಲ್ಲಿ ಕುಳಿತಿದ್ದ ಬೇಳೆ ಬ್ಯಾಲೆನ್ಸ ತಪ್ಪಿ ದೋಣಿ ಮಗುಚಿ ಬಿದ್ದಿದೆ. ಇನ್ನೂ ದೋಣಿಯಲ್ಲಿದ್ದವರ ಗುರುತು ಪತ್ತೆಯಾಗಿಲ್ಲ. ದೋಣಿಯಲ್ಲಿ ಎಷ್ಟು ಜನ ಇದ್ದರು ಎಂದು ಮಾತ್ರ ಗೊತ್ತಾಗಿದ್ದು, ಯಾರ ಗುರುತು ಕೂಡಾ ಇನ್ನೂ ಪತ್ತೆಯಾಗಿಲ್ಲ. ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಶಾಸಕ ದೇವೇಂದ್ರ (Devendra) ಅವರು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಅಸ್ಸಾಂನಲ್ಲಿಯೂ ದೋಣಿ ಮುಳುಗಿ ನೀರಿನಲ್ಲಿ ಮುಳುಗಿದ್ದ 80 ಕ್ಕೂ ಹೆಚ್ಚು ಮಂದಿ:
ಕಳೆದ ವಾರದ ಆರಂಭದಲ್ಲಿ, ಅಸ್ಸಾಂನಲ್ಲಿಯೂ (Assam) ದೊಡ್ಡ ದೋಣಿ ಅಪಘಾತ ಸಂಭವಿಸಿತ್ತು. ಅಲ್ಲಿ ಜೋರ್ಹತ್ ನದಿಯಲ್ಲಿ ಎರಡು ದೋಣಿಗಳು ಡಿಕ್ಕಿ ಹೊಡೆದ ಪರಿನಾಮ ಅವಘಡ ಸಂಭವಿಸಿತ್ತು. ಇದಾದ ನಂತರ ದೋಣಿ ಮಗುಚಿತ್ತು. ಮತ್ತು ಅದರಲ್ಲಿದ್ದ 80 ಕ್ಕೂ ಹೆಚ್ಚು ಜನರು ನೀರಿನಲ್ಲಿ ಮುಳುಗಿದ್ದರು. ಆದರೆ ಈ ಪೈಕಿ ಹೆಚ್ಚಿನವರನ್ನು ರಕ್ಷಿಸಲಾಗಿತ್ತು. ಇನ್ನು ಕೆಲವರು ಸ್ವತಃ ಈಜಿ ದಡ ಸೇರಿದ್ದರು. ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಅನೇಕ ಜನರು ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ : SBI Alert : ನಾಳೆ ಸ್ಥಗಿತಗೊಳ್ಳಲಿದೆ ಬ್ಯಾಂಕ್ ಸೇವೆ , ಯಾವುದೇ ವಹಿವಾಟು ನಡೆಸುವುದು ಸಾಧ್ಯವಿಲ್ಲ , ಸಂಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.