ನವದೆಹಲಿ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಬಳಿಕ ಮೌನ ಮುರಿದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಹಾಗೂ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿರುವ ಆದಿತ್ಯ ಠಾಕ್ರೆ ಸದ್ಯ ತಮ್ಮ ಮೌನ ಮುರಿದಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಆದಿತ್ಯ ಠಾಕ್ರೆ, ತಮ್ಮ ಮೇಲೆ ಹಾಗೂ ಠಾಕ್ರೆ ಕುಟುಂಬದ ಮೇಲೆ ಕೆಸರೆರಚುವ ಕೆಲಸದಲ್ಲಿ ಕೆಲ ಜನರು ನಿರತರಾಗಿದ್ದಾರೆ. ಸುಶಾಂತ್ ಸಿಂಗ್ ರಾಜ್ಪುತ್ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮರಾಠಿ ಭಾಷೆಯಲ್ಲಿ ತನ್ನ ಹೇಳಿಕೆ ಜಾರಿಗೊಳಿಸಿರುವ ಆದಿತ್ಯ ಠಾಕ್ರೆ, ಸುಶಾಂತ್ ಸಿಂಗ್ ರಾಜ್ಪುತ್ ಪ್ರಕರಣದಲ್ಲಿ ಕೇವಲ ರಾಜಕೀಯ ನಡೆಸಲಾಗುತ್ತಿದೆ ಎಂದಿದ್ದಾರೆ.


CBI ತನಿಖೆಗೆ ಬಿಹಾರ ಸರ್ಕಾರದಿಂದ ಶಿಫಾರಸು
ಚಿತ್ರ ನಟ ಸುಶಾಂತ್ ಸಿಂಗ್ ರಾಜಪುತ್ ಪ್ರಕರಣದ ತನಿಖೆಯನ್ನು CBI ಮೂಲಕ ಮಾಡಿಸಲು ಬಿಹಾರ ಸರ್ಕಾರ ಶಿಫಾರಸು ಮಾಡಿದೆ. ಈ ಕುರಿತು ಸ್ವತಃ ಟ್ವೀಟ್ ಮಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಿತೀಶ್ ಕುಮಾರ್, ಇದಕ್ಕೆ ಸುಶಾಂತ್ ಸಿಂಗ್ ರಾಜ್ಪುತ್ ಅವರ ತಂದೆ ಕೆ.ಕೆ.ಸಿಂಗ್ ಅವರ ಸಮ್ಮತಿ ದೊರೆತಿದ್ದು, ಇದೀಗ ರಾಜ್ಯ ಸರ್ಕಾರ ಕೂಡ ಸುಶಾಂತ್ ಸಾವು ಪ್ರಕರಣದ ತನಿಖೆಯನ್ನು CBI ನಡೆಸಬೇಕು ಎಂದು ಶಿಫಾರಸು ಮಾಡಿದೆ ಎಂದಿದ್ದಾರೆ.


ಮಂಗಳವಾರ ಈ ಸಿಬಿಐ ತನಿಖೆಯ ಸುದ್ದಿ ಮುಂಬೈ ಪೊಲೀಸರ ಬಳಿ ತಲುಪಿದಾಗ ತೀವ್ರ ಕೋಲಾಹಲ ಸೃಷ್ಟಿಯಾಗಿದೆ. ಮೂಲಗಳ ಪ್ರಕಾರ ಮುಂಬೈ ಪೋಲೀಸ್ ಅಧಿಕಾರಿಗಳು ಸಿಬಿಐ ತನಿಖೆ ಹಾಗೂ ಸುಶಾಂತ್ ಪ್ರಕರಣದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ  ಗಮನ ಕೇಂದ್ರೀಕರಿಸಿದ್ದಾರೆ ಎನ್ನಲಾಗಿದೆ. ಸಿಬಿಐ ತನಿಖೆಯ ಮುನ್ಸೂಚನೆ ಸಿಗುತ್ತಿದ್ದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಹಲವರ ಮನದಲ್ಲಿ ಆತಂಕ ಮನೆ ಮಾಡಿದೆ ಎನ್ನಲಾಗಿದೆ.