ಮುಂಬೈ: ಕೇಂದ್ರದಲ್ಲಿ ಎರಡನೆ ಅವಧಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಕಾಂಗ್ರೆಸ್ ಶಾಸಕಿ ನಿರ್ಮಲಾ ಗವಿತ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿವಸೇನೆಗೆ ಮಂಗಳವಾರ ಸೇರ್ಪಡೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

1980 ಮತ್ತು 2014 ರ ನಡುವೆ ನಂದೂರ್ಬಾರ್ ಲೋಕಸಭಾ ಕ್ಷೇತ್ರವನ್ನು ಒಂಬತ್ತು ಬಾರಿ ಪ್ರತಿನಿಧಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಮಾಣಿಕರಾವ್ ಗವಿತ್ ಅವರ ಪುತ್ರಿ ನಿರ್ಮಲಾ ಗವಿತ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯದ ಪಕ್ಷದ ಮುಖ್ಯಸ್ಥರಿಗೆ ಕಳುಹಿಸಿದ್ದು, ಈಗ ಗುರುವಾರ ಶಿವಸೇನೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.


ಲೋಕಸಭಾ ಚುನಾವಣೆ 2019ರಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ ದೇಶಾದ್ಯಂತ ಹಲವು  ನಾಯಕರು ಕಾಂಗ್ರೆಸ್ ತೊರೆದಿದ್ದಾರೆ. ವಿಶೇಷವಾಗಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮೈತ್ರಿ ಪಕ್ಷಗಳು, ಬಿಜೆಪಿ-ಶಿವಸೇನ ಮೈತ್ರಿ ಮುಂದೆ ನಿಜಕ್ಕೂ ವಿಫಲವಾಗಿದೆ. 


ಕಳೆದ ಹತ್ತು ವರ್ಷಗಳ ಕಾಲ ಇಗತ್‌ಪುರಿಯ ಅಸೆಂಬ್ಲಿ ಸ್ಥಾನವನ್ನು ಪ್ರತಿನಿಧಿಸುತ್ತಿದ್ದ ಗವಿತ್‌ ಅವರ ನಿರ್ಗಮನದಿಂದಾಗಿ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬೀಳಲಿದೆ.