ನವದೆಹಲಿ: ಮಹಾರಾಷ್ಟ್ರದ  ಬುಲ್ದಾನಾ ಜಿಲ್ಲೆಯ ಮೋಹಂಗೊನ್ ನಲ್ಲಿ ಬುಧವಾರ ರೈತರ ಭೂಮಿಯಲ್ಲಿ ಒಂದು ಕೋಟಿ ರೂ. ನಕಲಿ ನೋಟುಗಳು ಪತ್ತೆಯಾಗಿವೆ. ಗ್ರಾಮದಲ್ಲಿ ನಕಲಿ ನೋಟು ಪತ್ತೆಯಾಗಿರುವ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿ ರೈತರ ಭೂಮಿಯಲ್ಲಿ 2000, 500 ಮತ್ತು 200 ರೂಪಾಯಿಗಳ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING


ಪೊಲೀಸ್ ವಶದಲ್ಲಿ ಓರ್ವ ಆರೋಪಿ:
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಡಿಪಿಒ ಬಾಬುರಾವ್ ಮಹಾಮುನಿ ಅವರ ಪ್ರಕಾರ, ಬುಧವಾರ, ಅವರು ರೈತರ ಭೂಮಿಯಲ್ಲಿ ಒಂದು ಕೋಟಿ ರೂಪಾಯಿಗಳ ನಕಲಿ ನೋಟುಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು 2000, 500 ಮತ್ತು 200 ರೂಪಾಯಿಗಳ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಶನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಆತನ ಸಹಚರರಿಗಾಗಿ ಹುಡುಕಾಟ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಗ್ರಾಮದ 5 ಜನರು ಈ ನಕಲಿ ನೋಟುಗಳ ದಂದೆಯಲ್ಲಿ ತೊಡಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅವರಲ್ಲಿ ಒಬ್ಬನನ್ನು ಬಂದಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ಪ್ರಾರಂಭವಾಗಿದೆ. ಇವರ ಹಿಂದೆ ದೊಡ್ಡ ಗುಂಪು ಕಾರ್ಯ ನಿರ್ವಹಿಸುತ್ತಿರಬಹುದು ಎಂಬ ಸಂಶಯವೂ ಇದೇ ಎಂದು ತಿಳಿಸಿದ್ದಾರೆ.