ನವದೆಹಲಿ: ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವ ಬಿಜೆಪಿ ನಿರ್ಧಾರವು ಎಲ್ಲರನ್ನೂ ದಂಗುಬಡಿಸಿತ್ತು. ಉದ್ಧವ್ ಠಾಕ್ರೆ ರಾಜೀನಾಮೆ ನಂತರ ದೇವೇಂದ್ರ ಫಡ್ನವಿಸ್ ಮತ್ತೊಮ್ಮೆ ಮಹಾರಾಷ್ಟ್ರದ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿತ್ತು. ಕೊನೆ ಕ್ಷಣದಲ್ಲಿ ಬಿಜೆಪಿ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿತ್ತು.


COMMERCIAL BREAK
SCROLL TO CONTINUE READING

ಬಿಜೆಪಿಯ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದವು. ಶಿಂಧೆಗೆ ಯಾವುದೇ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲ, ಅವರು ಯಾವಾಗಲೂ ಬಿಜೆಪಿ ಮತ್ತು ದೇವೇಂದ್ರ ಫಡ್ನವಿಸ್‍ರಿಂದ ಒತ್ತಡದಲ್ಲಿರುತ್ತಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಈ ನಡುವೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಶಿಂಧೆಯನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.


ಭಾರದ ಮನಸ್ಸಿನಿಂದ ಶಿಂಧೆ ಸಿಎಂ ಮಾಡಲು ನಿರ್ಧಾರ?


ದೇವೇಂದ್ರ ಫಡ್ನವಿಸ್ ಬದಲಿಗೆ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ‘ಭಾರದ ಮನಸ್ಸಿನ’ ನಿರ್ಧಾರ ತೆಗೆದುಕೊಂಡಿದೆ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. ಪನ್ವೇಲ್‌ನಲ್ಲಿ ನಡೆದ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿರುವ ಅವರು ‘ವಿರೋಧಿಗಳಿಗೆ ಸರಿಯಾದ ಸಂದೇಶವನ್ನು ರವಾನಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: Viral News: ‘ಹುಂಜ’ದ ಆತ್ಮಶಾಂತಿಗೋಸ್ಕರ ತಿಥಿ; 500 ಜನರಿಗೆ ಊಟ..!


ಚಂದ್ರಕಾಂತ ಪಾಟೀಲ್ ಹೇಳಿದ್ದೇನು..?  


ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ, ಜೂನ್ 30ರಂದು ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ‘ನಮ್ಮ ವಿರೋಧಿಗಳಿಗೆ ಸರಿಯಾದ ಸಂದೇಶ ನೀಡುವ ಉದ್ದೇಶದಿಂದ ಶಿಂಧೆ ಅವರನ್ನು ಸಿಎಂ ಎಂದು ಘೋಷಿಸಲಾಯಿತು. ಸ್ಥಿರ ಸರ್ಕಾರ ರಚಿಸಲು ಹೊಸ ನಾಯಕನನ್ನು ನಾವು ನೀಡಬೇಕಾಗಿತ್ತು. ಹೀಗಾಗಿ ಕೇಂದ್ರ ನಾಯಕತ್ವ ಮತ್ತು ದೇವೇಂದ್ರ ಫಡ್ನವೀಸ್ ಅವರು ಭಾರದ ಮನಸ್ಸಿನಿಂದ ಶಿಂಧೆ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಲು ನಿರ್ಧರಿಸಿದರು. ಈ ಬಗ್ಗೆ ನಾವು ಅತೃಪ್ತರಾಗಿದ್ದೇವು, ಆದರೆ ತೀರ್ಪನ್ನು ಒಪ್ಪಿಕೊಳ್ಳಲು ನಿರ್ಧರಿಸಿದೇವು’ ಎಂದು ಪಾಟೀಲ್ ಹೇಳಿದ್ದಾರೆ.


ಇದು ಪಕ್ಷದ ಅಥವಾ ಪಾಟೀಲರ ನಿಲುವಲ್ಲ


ಏತನ್ಮಧ್ಯೆ ಪಾಟೀಲ್ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಬಿಜೆಪಿ ನಾಯಕ ಆಶಿಶ್ ಶೆಲಾರ್, ‘ಇದು ಪಕ್ಷದ ಅಥವಾ ಪಾಟೀಲ್ ಅವರ ನಿಲುವಲ್ಲ. ಆದರೆ ಅವರು ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಉಲ್ಲೇಖಿಸಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ.


ಇದನ್ನೂ ಓದಿ: Bank Holidays: ಆಗಸ್ಟ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 13 ದಿನ ರಜೆ, ಪೂರ್ಣ ಪಟ್ಟಿ ಇಲ್ಲಿದೆ ನೋಡಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.