ನವದೆಹಲಿ: ಭಾರತದದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ರೋಗಕ್ಕೆ ತುತ್ತಾಗಿರುವ ರಾಜ್ಯವೆಂದರೆ ಅದು ಮಹಾರಾಷ್ಟ್ರ, ಈಗ ಇಲ್ಲಿ ಪ್ರತಿದಿನವೂ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಲೇ ಇದೆ.


COMMERCIAL BREAK
SCROLL TO CONTINUE READING

ಈಗ ಶನಿವಾರದಂದು ಮಹಾರಾಷ್ಟ್ರವು ಶನಿವಾರ 3,427 ಹೊಸ ಕರೋನವೈರಸ್ ಸೋಂಕುಗಳನ್ನು ವರದಿ ಮಾಡಿದೆ, ಈ ಮೂಲಕ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 1,04,568 ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಈಗ 51,392 ಸಕ್ರಿಯ ಪ್ರಕರಣಗಳಿವೆ.


ಇದನ್ನೂ ಓದಿ: ಭಾರತದಲ್ಲಿ 3 ಲಕ್ಷ ಮೀರಿದ ಕರೋನಾ ಪ್ರಕರಣ, ಚೀನಾ-ಕೆನಡಾವನ್ನು ಹಿಂದಿಕ್ಕಿದ ಮಹಾರಾಷ್ಟ್ರ


ಕಳೆದ 24 ಗಂಟೆಗಳಲ್ಲಿ ರಾಜ್ಯದ ಸಾವಿನ ಸಂಖ್ಯೆ 113 ರಷ್ಟು ಏರಿಕೆಯಾಗಿ 3,830 ಕ್ಕೆ ತಲುಪಿದೆ. ಇದುವರಗೆ ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 49,346 ಆಗಿದ್ದರೆ  ಒಟ್ಟು 1,550 ರೋಗಿಗಳನ್ನು ಇಂದು ಬಿಡುಗಡೆ ಮಾಡಲಾಗಿದೆ. COVID-19 ಚೇತರಿಕೆ ದರವು ಈಗ 47.2% ರಷ್ಟಿದ್ದರೆ, ಸಾವಿನ ಪ್ರಮಾಣ 3.7% ರಷ್ಟಿದೆ.


ಮಹಾರಾಷ್ಟ್ರ ನಿನ್ನೆ 1 ಲಕ್ಷ ಕರೋನವೈರಸ್ ಪ್ರಕರಣಗಳು ದೃಢಪಟ್ಟ ಮೊದಲ ಭಾರತೀಯ ರಾಜ್ಯ ಎನ್ನುವ ಕುಖ್ಯಾತಿಗೆ ಪಾತ್ರವಾಗಿತ್ತು