ನನ್ನ ರಾಜಕೀಯ ಮುಗಿದಿದೆ ಎಂದವರಿಗೆ ಮಹಾ ತೀರ್ಪು ಒಂದು ಪಾಠ: ಶರದ್ ಪವಾರ್
ನನ್ನ ರಾಜಕೀಯದ ದಿನಗಳು ಮುಗಿದಿವೆ ಎಂದು ಹೇಳಿದವರಿಗೆ ಮಹಾರಾಷ್ಟ್ರದ ತೀರ್ಪು ಒಂದು ಪಾಠ ಎಂದು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2019ರಲ್ಲಿ ತನ್ನ ಮಿತ್ರ ಪಕ್ಷ ಕಾಂಗ್ರೆಸ್ ಗಿಂತ ಎನ್‌ಸಿಪಿ ಉತ್ತಮ ಪ್ರದರ್ಶನ ನೀಡಿದ ಬೆನ್ನಲ್ಲೇ, ನನ್ನ ರಾಜಕೀಯದ ದಿನಗಳು ಮುಗಿದಿವೆ ಎಂದು ಹೇಳಿದವರಿಗೆ ಮಹಾರಾಷ್ಟ್ರದ ತೀರ್ಪು ಒಂದು ಪಾಠ ಎಂದು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ನನ್ನ ರಾಜಕೀಯ ಮುಗಿದಿದೆ ಎಂದು ಹೇಳಿದ ಪಕ್ಷಕ್ಕೆ ಹಾಗೂ ಅದರ ನಾಯಕರಿಗೆ ಮಹಾರಾಷ್ಟ್ರದ ಜನತೆ ತಕ್ಕ ಉತ್ತರ ನೀಡಿದ್ದಾರೆ. ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿ, ವಾಗ್ದಾಳಿ ನಡೆಸಿದವರಿಗೆ ಜನರೇ ತಕ್ಕ ಪಾಠ ಕಳಿಸಿದ್ದಾರೆ ಎಂದು ಹೇಳಿದ್ದಾರೆ.
"288 ಸ್ಥಾನಗಳಲ್ಲಿ ಜನರು 220 ಸ್ಥಾನಗಳನ್ನು ಸಹ ಜನರು ಬಿಜೆಪಿ-ಶಿವಸೇನೆ ಮೈತ್ರಿಗೆ ನೀಡಿಲ್ಲ. ಆದರೂ, ಎನ್‌ಸಿಪಿ ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತದೆ. ಕಾಂಗ್ರೆಸ್, ಎನ್‌ಸಿಪಿ, ಪಿಡಬ್ಲ್ಯೂಪಿ, ಸ್ವಾಭಿಮಾನಿ ಶೆಟ್ಕರಿ ಸಂಘಟನ ಮತ್ತು ಇತರ ಮಿತ್ರಪಕ್ಷಗಳು ಪರಸ್ಪರ ಪೂರ್ಣವಾಗಿ ಸಹಕರಿಸಿವೆ. ಜನರು ಅಧಿಕಾರದ ದುರಹಂಕಾರವನ್ನು ಇಷ್ಟಪಡುವುದಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶ ಸಾಬೀತುಪಡಿಸಿದೆ" ಎಂದು ಪವಾರ್ ಹೇಳಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ಪಕ್ಷದ ಶ್ರಮವನ್ನೂ ಸಹ ಪವಾರ್ ಶ್ಲಾಘಿಸಿದ್ದು, ಅಭಿನಂದನೆ ತಿಳಿಸಿದ್ದಾರೆ.