ಮುಂಬೈ: ಜಗನ್ನಾಥ ಭೋನ್ಸ್ಲೆ (84) ಪತ್ನಿ ಸುಮನ್ (83) ಎಂಬ ವೃದ್ಧ ದಂಪತಿಗಳು ವರ್ಲಿ ಪ್ರದೇಶದಲ್ಲಿ ಮತ ಚಲಾಯಿಸಿದ್ದಾರೆ. ವಿಶೇಷವೆಂದರೆ ಇಂದು ಅವರ 60 ನೇ ವಿವಾಹ ವಾರ್ಷಿಕೋತ್ಸವ. ಈ ವೃದ್ಧ ದಂಪತಿಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ತಮ್ಮ 60 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ವೃದ್ಧ ದಂಪತಿಗಳು ತಮ್ಮ ಮತದಾನ ಚಲಾಯಿಸುವ ಸಲುವಾಗಿ ಗ್ರಾಮದಿಂದ ಮುಂಬೈಗೆ ಬಂದಿರುವುದಾಗಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ 288 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಮತ ಚಲಾಯಿಸಲು ಆಗಮಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, "ಬಿಜೆಪಿ-ಶಿವಸೇನೆ ಸುಮಾರು 225 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು. ಪ್ರತಿಪಕ್ಷಗಳ ವಿಶ್ವಾಸಾರ್ಹತೆ ಸಂಪೂರ್ಣವಾಗಿ ಮುಗಿದಿದೆ. ಜನರು ಮೋದಿ ಜಿ ಮತ್ತು ಫಡ್ನವಿಸ್ ಜಿ ಅವರೊಂದಿಗೆ ಇದ್ದಾರೆ" ಎಂದರು. 


ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪತ್ನಿ ಕಾಂಚನ್ ಅವರೊಂದಿಗೆ ಮತ ಚಲಾಯಿಸಿದರು. ಇಂದು ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾಗಿದೆ. ಜನರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದು ಅವರು ಮತದಾರರಿಗೆ ಕರೆ ನೀಡಿದರು.



ಇದಕ್ಕೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜೊತೆಗೆ, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಜೂಲಿಯೊ ರಿಬೈರೊ (ವರ್ಲಿ ಅಸೆಂಬ್ಲಿ), ನಟಿ ಶೋಭಾ ಖೋಟೆ (ಅಂಧೇರಿ ಪಶ್ಚಿಮ ಅಸೆಂಬ್ಲಿ) ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ಅಜಿತ್ ಪವಾರ್ ಅವರು ಮತ ಚಲಾಯಿಸಿದರು. ಎನ್‌ಸಿಪಿ ಹಿರಿಯ ಮುಖಂಡ ಅಜಿತ್ ಪವಾರ್ ಅವರು ಬಾರಾಮತಿ ವಿಧಾನಸಭೆಯಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಬಿಜೆಪಿಯ ಗೋಪಿಚಂದ್ ಪಡಲ್ಕರ್ ವಿರುದ್ಧ ಸ್ಪರ್ಧಿಸಿದ್ದಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ-ಶಿವಸೇನೆ ಮತ್ತು ವಿರೋಧ ಪಕ್ಷದ ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ನಡುವೆ ಸ್ಪರ್ಧೆ ಇದೆ.