ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 67 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲು
ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರವು ಕೊರೋನವೈರಸ್ 67,160 ಪ್ರಕರಣ ಮತ್ತು 676 ಸಾವುಗಳಿಗೆ ಸಾಕ್ಷಿಯಾಗಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ಬುಲೆಟಿನ್ ಶನಿವಾರ ತಿಳಿಸಿದೆ.
ನವದೆಹಲಿ: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರವು ಕೊರೋನವೈರಸ್ 67,160 ಪ್ರಕರಣ ಮತ್ತು 676 ಸಾವುಗಳಿಗೆ ಸಾಕ್ಷಿಯಾಗಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ಬುಲೆಟಿನ್ ಶನಿವಾರ ತಿಳಿಸಿದೆ.
ದೇಶದ ಅತಿ ಹೆಚ್ಚು ಹಾನಿಗೊಳಗಾದ ಮಹಾರಾಷ್ಟ್ರ(Maharashtra) ದಲ್ಲಿ 422,8,836 ಪ್ರಕರಣ ಮತ್ತು ಸಾವಿನ ಸಂಖ್ಯೆ 63,928 ಕ್ಕೆ ಏರಿದೆ.ಶನಿವಾರ ಬಿಡುಗಡೆಯಾದ ರೋಗಿಗಳ ಸಂಖ್ಯೆ 63,818 ಆಗಿದ್ದು, ಶುಕ್ರವಾರದಿಂದ 10,000 ಕ್ಕಿಂತಲೂ ಕಡಿಮೆಯಾಗಿದೆ.ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 694,480 ಆಗಿದೆ.
ಇದನ್ನೂ ಓದಿ- ಮಹಿಳೆಯರೇ ಗಮನಿಸಿ! Corona Vaccine ನಿಮ್ಮ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರಲು ಕಾರಣ ಏನು ಗೊತ್ತೇ?
ಮುಂಬೈನಲ್ಲಿ ಶನಿವಾರ 5,888 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಶುಕ್ರವಾರದಿಂದ 1,311 ಪ್ರಕರಣಗಳು ಕಡಿಮೆಯಾಗಿದೆ.ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ ವರದಿಯಾದ ಸಾವುಗಳ ಸಂಖ್ಯೆ 71 ಆಗಿದ್ದು, ಆ ಮೂಲಕ ಸಾವಿನ ಸಂಖ್ಯೆ 12,719 ಕ್ಕೆ ತಲುಪಿದೆ ಎಂದು ಆರೋಗ್ಯ ಬುಲೆಟಿನ್ ಅಂಕಿ ಅಂಶಗಳು ತಿಳಿಸಿವೆ.
ಕಳೆದ 24 ಗಂಟೆಗಳಲ್ಲಿ ಶನಿವಾರ ರಾಜ್ಯದಲ್ಲಿ ಪರೀಕ್ಷಿಸಿದ ಮಾದರಿಗಳ ಸಂಖ್ಯೆ 286,412 ಆಗಿದೆ. ಕಳೆದ 24 ಗಂಟೆಗಳಲ್ಲಿ ಪರೀಕ್ಷೆಯಲ್ಲಿ 8,000 ಕ್ಕಿಂತ ಹೆಚ್ಚಾಗಿದೆ. ಡ್ಯಾಶ್‌ಬೋರ್ಡ್ ಪ್ರಕಾರ ರಾಜ್ಯದಲ್ಲಿ ಇಲ್ಲಿಯವರೆಗೆ ಮಾಡಿದ ಒಟ್ಟು ಪರೀಕ್ಷೆಗಳ ಸಂಖ್ಯೆ 25,460,008.ಎನ್ನಲಾಗಿದೆ.
ಇದನ್ನೂ ಓದಿ- AstraZeneca ವ್ಯಾಕ್ಸಿನ್ ನಿಂದ ರಕ್ತ ಹೆಪ್ಪುಗಟ್ಟುವಿಕೆಯ ದೂರು, ಈ ದೇಶಗಳಲ್ಲಿ ಲಸಿಕೆ ಬಳಕೆಗೆ ಬ್ಯಾನ್
ಪ್ರಸ್ತುತ ಮಹಾರಾಷ್ಟ್ರದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 82.02 ರಷ್ಟಿದೆ ಮತ್ತು ಸಾವಿನ ಪ್ರಮಾಣವು ಶೇಕಡಾ 1.51 ರಷ್ಟಿದೆ. ಸಾವಿನ ಪ್ರಮಾಣ ಶುಕ್ರವಾರದಿಂದ 0.01 ಶೇಕಡಾ ಅಂಕಗಳಿಂದ ಕುಸಿದಿದೆ. ಮುಂಬೈನಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 85 ರಷ್ಟಿದ್ದು, ಕಳೆದ 24 ಗಂಟೆಗಳಲ್ಲಿ 8,549 ಚೇತರಿಕೆ ಪ್ರಕರಣಗಳು ವರದಿಯಾಗಿವೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.