ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೃದಯ ಬಡಿತ ಕೇಳಬೇಕೆ??? ಇದೇನಿದು ಗಾಂಧೀಜಿ ಸಾವನ್ನಪ್ಪಿ 60 ಕ್ಕೂ ಹೆಚ್ಚು ವರ್ಷಗಳೇ ಕಳೆದಿವೆ. ಈಗ ಹೇಗೆ ಅವರ ಹೃದಯ ಬಡಿತ ಕೇಳಲು ಸಾಧ್ಯ ಎಂದು ಆಲೋಚಿಸುತ್ತಿದೀರಾ? ಹೌದು, ದೆಹಲಿಯ ಗಾಂಧಿ ನ್ಯಾಷನಲ್ ಮ್ಯೂಸಿಯಂನಲ್ಲಿ ಈ ಅವಕಾಶ ನಿಮಗೆ ದೊರೆಯಲಿದೆ!


COMMERCIAL BREAK
SCROLL TO CONTINUE READING

1934ರಲ್ಲಿ ತೆಗೆದ ಮಹಾತ್ಮಾ ಗಾಂಧಿ ಅವರ ಇಸಿಜಿ ವರದಿಯನ್ನು ಆಧರಿಸಿ ಹೃದಯ ಬಡಿತವನ್ನು ಮರುಸೃಷ್ಟಿ ಮಾಡಲಾಗಿದ್ದು, ಗಾಂಧಿ ಜಯಂತಿ(ಅಕ್ಟೋಬರ್ 2)ಯಂದು ಈ ವ್ಯವಸ್ಥೆ ಉದ್ಘಾಟನೆಯಾಗಲಿದೆ ಎಂದು ಮ್ಯೂಸಿಯಂ ನಿರ್ದೇಶಕ ಎ. ಅಣ್ಣಾಮಲೈ ಹೇಳಿದ್ದಾರೆ.


ಗಾಂಧೀಜಿಯವರು ಉಪವಾಸ ಸತ್ಯಾಗ್ರಹ ಕೈಗೊಂಡ ಸಂದರ್ಭದಲ್ಲಿ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ಡಾ.ಜೀವ್ ರಾಮ್ ಮೆಹ್ತಾ, ಡಾ.ಬಿ.ಸಿ.ರಾಯ್ ಎಂಬ ವೈದ್ಯರು ಗಾಂಧೀಜಿಯವರ ಆರೋಗ್ಯ ತಪಾಸಣೆ ನಡೆಸುತ್ತಿದ್ದರು. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು AIIMS ಸದ್ಯದಲ್ಲೇ ಪ್ರಕಟಿಸಲಿದೆ ಎಂದಿದ್ದಾರೆ.