ನವದೆಹಲಿ : ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 70ನೇ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಇತರ ಪ್ರಮುಖ ರಾಜಕೀಯ ನಾಯಕರು ಮಂಗಳವಾರ ರಾಜ್ ಘಾಟ್ ನಲ್ಲಿ ಮಹಾತ್ಮಾ ಗಾಂಧಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. 





COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಇತರ ಸ್ವಾತಂತ್ರ್ಯ ಹೋರಾಟಗಾರರಿಗೂ ಸಹ ಗೌರವ ನಮನ ಸಲ್ಲಿಸಲಾಯಿತು. 


"ಹುತಾತ್ಮರ ದಿನದಂದು, ಮಹಾತ್ಮ ಗಾಂಧಿ ಮತ್ತು ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇವೆ. ಅವರು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ" ಎಂದು ರಾಷ್ಟ್ರಪತಿ ಕೋವಿಂದ್ ಟ್ವೀಟ್ ಮಾಡಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಕೂಡಾ "ನಮ್ಮ ದೇಶದ ಸೇವೆಗಾಗಿ ತ್ಯಾಗ ಮಾಡಿದ ಎಲ್ಲ ಹುತಾತ್ಮರಿಗೆ ನಾನು ತಲೆಬಾಗುತ್ತೇನೆ. ಅವರ ಧೈರ್ಯವನ್ನು ಮತ್ತು ರಾಷ್ಟ್ರದ ಉನ್ನತಿಗಾಗಿ ಅವರ ಸಮರ್ಪಣೆಯನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ. 


ಅಹಮದಾಬಾದ್ನ ಸಬರ್ಮತಿ ಆಶ್ರಮಕ್ಕೆ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. 



1948 ಜನವರಿ 30 ರಂದು ನಾಥೂರಾಮ್ ಗೋಡ್ಸೆ 'ಬಾಪು' ಮೋಹನದಾಸ್ ಕರಮಚಂದ್ ಗಾಂಧಿಯವರನ್ನು ಹತ್ಯೆಗೈದನು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಿದ ಜನರ ಗೌರವಾರ್ಪಣೆಗಾಗಿ ಈ ದಿನವನ್ನು ಹುತಾತ್ಮರ ದಿನದಂದು ಆಚರಿಸಲಾಗುತ್ತಿದೆ.