ಮಹಾತ್ಮಾ ಗಾಂಧಿ ಸಿದ್ಧಾಂತ ಅವರನ್ನು ಕೊಂದ ಗೋಡ್ಸೆವಾದಿಗಳಿಗೆ ಸೋತಿದೆ -ದಿಗ್ವಿಜಯ್ ಸಿಂಗ್
ಭೂಪಾಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಸೋತ ನಂತರ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮಹಾತ್ಮಾ ಗಾಂಧಿ ಸಿದ್ಧಾಂತ ಅವರನ್ನು ಕೊಂದ ಗೋಡ್ಸೆವಾದಿಗಳಿಗೆ ಸೋತಿದೆ ಎಂದು ಹೇಳಿದ್ದಾರೆ.
ನವದೆಹಲಿ: ಭೂಪಾಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಸೋತ ನಂತರ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮಹಾತ್ಮಾ ಗಾಂಧಿ ಸಿದ್ಧಾಂತ ಅವರನ್ನು ಕೊಂದ ಗೋಡ್ಸೆವಾದಿಗಳಿಗೆ ಸೋತಿದೆ ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಎಂದು ಕರೆದಿದ್ದ ಬಿಜೆಪಿಯ ಪ್ರಗ್ಯಾ ಠಾಕೂರ್ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್ ಪ್ರಜಾಪ್ರಭುತ್ವದಲ್ಲಿ ಜನರ ಆದೇಶವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ ಅವರು ಮಹಾತ್ಮಾ ಗಾಂಧಿ ಸಿದ್ಧಾಂತ ಅವರನ್ನು ಕೊಂದಂತಹ ಗೋಡ್ಸೆವಾದಿಗಳಿಗೆ ಸೋತಿದೆ ಎಂದು ಹೇಳಿದರು. ಇದೇ ವೇಳೆ ಇವಿಎಂ ಯಂತ್ರಗಳ ಬಗ್ಗೆ ಕೇಳಿದಾಗ ಸಿಂಗ್ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. 2019 ರಲ್ಲಿ ಬಿಜೆಪಿ 300 ಸ್ಥಾನಗಳನ್ನು ಯಾವ ಮ್ಯಾಜಿಕ್ ನಿಂದ ಗೆದ್ದಿದೆ ಎನ್ನುವುದು ತಮಗೆ ತಿಳಿದಿಲ್ಲವೆಂದರು.
ಮೇ 16 ರಂದು ಆಗ್ರಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ "ನಾಥುರಾಮ್ ಗೋಡ್ಸೆ ದೇಶಭಕ್ತ, ಅವರು ದೇಶ ಭಕ್ತರಾಗಿಯೇ ಉಳಿಯುತ್ತಾರೆ ಅವರನ್ನು ಭಯೋತ್ಪಾಧಕ ಎಂದು ಕರೆಯುವವರು ತಮ್ಮ ಹೇಳಿಕೆಯನ್ನು ಪರಿಗಣಿಸಬೇಕು.ಅದಕ್ಕೆ ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ಸಿಗಲಿದೆ" ಎಂದು ಪ್ರತಿಕ್ರಿಯಿಸಿದ್ದರು.