ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೃದಯ ಬಡಿತವನ್ನು ಮರುಸೃಷ್ಟಿ ಮಾಡಲಾಗಿದ್ದು, ದೆಹಲಿಯ ಗಾಂಧಿ ನ್ಯಾಷನಲ್ ಮ್ಯೂಸಿಯಂನಲ್ಲಿ ನಾಳೆಯಿಂದ ಕೇಳಬಹುದು.


COMMERCIAL BREAK
SCROLL TO CONTINUE READING

1934ರಲ್ಲಿ ತೆಗೆದ ಮಹಾತ್ಮಾ ಗಾಂಧಿ ಇಸಿಜಿ ವರದಿಯನ್ನು ಆಧರಿಸಿ ಹೃದಯ ಬಡಿತವನ್ನು ಮರುಸೃಷ್ಟಿ ಮಾಡಲಾಗಿದ್ದು, ಗಾಂಧಿ ಜಯಂತಿ(ಅಕ್ಟೋಬರ್ 2)ಯಂದು ಈ ವ್ಯವಸ್ಥೆ ಉದ್ಘಾಟನೆಯಾಗಲಿದೆ ಎಂದು ಮ್ಯೂಸಿಯಂ ನಿರ್ದೇಶಕ ಎ. ಅಣ್ಣಾಮಲೈ ಹೇಳಿದ್ದಾರೆ.


ಗಾಂಧೀಜಿಯವರು ಉಪವಾಸ ಸತ್ಯಾಗ್ರಹ ಕೈಗೊಂಡ ಸಂದರ್ಭದಲ್ಲಿ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ಡಾ.ಜೀವ್ ರಾಮ್ ಮೆಹ್ತಾ, ಡಾ.ಬಿ.ಸಿ.ರಾಯ್ ಎಂಬ ವೈದ್ಯರು ಗಾಂಧೀಜಿಯವರ ಆರೋಗ್ಯ ತಪಾಸಣೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು AIIMS ಸದ್ಯದಲ್ಲೇ ಪ್ರಕಟಿಸಲಿದೆ ಎಂದಿದ್ದಾರೆ.