ಭಾರತದಲ್ಲಿ XUV500 ಡಿಸೇಲ್-ಆಟೋಮ್ಯಾಟಿಕ್ ಲಾಂಚ್ ಮಾಡಿದ Mahindra, ಮನಸೂರೆಗೊಳಿಸಲಿವೆ ಇದರ ವೈಶಿಷ್ಟ್ಯಗಳು
ದೇಶೀಯ ಕಾರು ತಯಾರಕ ಮಹೀಂದ್ರಾ ಮತ್ತು ಮಹೀಂದ್ರಾ ತನ್ನ ಬಿಎಸ್ 6 ಸ್ಟ್ಯಾಂಡರ್ಡ್ ಆಧಾರಿತ ಎಕ್ಸ್‌ಯುವಿ 500 (XUV500) ನ ಡೀಸೆಲ್ ಸ್ವಯಂಚಾಲಿತ ಆವೃತ್ತಿಯನ್ನು ಭಾರತದಲ್ಲಿ ರೀಲಾಂಚ್ ಮಾಡಿದೆ.
ನವದೆಹಲಿ: ದೇಶೀಯ ಕಾರು ತಯಾರಕ ಮಹೀಂದ್ರಾ ಮತ್ತು ಮಹೀಂದ್ರಾ ತನ್ನ ಬಿಎಸ್ 6 ಸ್ಟ್ಯಾಂಡರ್ಡ್ ಆಧಾರಿತ ಎಕ್ಸ್‌ಯುವಿ 500 (XUV500) ನ ಡೀಸೆಲ್ ಸ್ವಯಂಚಾಲಿತ ಆವೃತ್ತಿಯನ್ನು ಭಾರತದಲ್ಲಿ ರೀಲಾಂಚ್ ಮಾಡಿದೆ. ಆದರೂ, ಈ ವರ್ಷದ ಆರಂಭದಲ್ಲಿ, ಬಿಎಸ್ 6 ನವೀಕರಣದ ಸಮಯದಲ್ಲಿ ಕಂಪನಿಯು ತನ್ನ ಎಕ್ಸ್‌ಯುವಿ ಉತ್ಪಾದನೆಯನ್ನು ನಿಲ್ಲಿಸಿತ್ತು. ಬಳಿಕ ಕಂಪನಿಯು ತನ್ನ ಕಾರಿಗೆ ಹಲವು ರೀತಿಯ ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ, ಅದರ ನಂತರ ಕಾರಿನ ಬೆಲೆಯಲ್ಲಿಯೂ ಸಹ ಸ್ವಲ್ಪ ಹೆಚ್ಚಳ ಮಾಡಿದೆ.
ಇಲ್ಲಿದೆ ಇಂಜಿನ್ ವೈಶಿಷ್ಟ್ಯ
ಎಕ್ಸ್‌ಯುವಿ 500 ಸ್ವಯಂಚಾಲಿತ ಮಾದರಿಯು 6-ಸ್ಪೀಡ್ ಮ್ಯಾನುವಲ್ ಆವೃತ್ತಿಯಂತೆಯೇ 2.2-ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಜೋಡಿಸಲಾಗಿದೆ. 6-ಸ್ಪೀಡ್ ಟಾರ್ಕ್ ಪರಿವರ್ತಕ ಆಯ್ಕೆಯೊಂದಿಗೆ ಎಕ್ಸ್‌ಯುವಿ 500 ಅನ್ನು ಬಿಡುಗಡೆ ಮಾಡಲಾಗಿದೆ. ಈ ಎಂಜಿನ್ 155 ಪಿಎಸ್ ಶಕ್ತಿಯನ್ನು ಮತ್ತು 360 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆಲ್-ವೀಲ್-ಡ್ರೈವ್ ವೈಶಿಷ್ಟ್ಯವನ್ನು ಬಿಎಸ್ 6 ಮಾದರಿಯಲ್ಲಿ ನೀಡಲಾಗಿಲ್ಲ. ಇದು 2,700 ಮಿಮೀ ವೀಲ್‌ಬೇಸ್ ಹೊಂದಿದೆ. ಎಕ್ಸ್‌ಯುವಿ 500 ಉದ್ದ 4,585 ಮಿಮೀ, ಅಗಲ 1,890 ಮಿಮೀ ಮತ್ತು ಎತ್ತರ 1,785 ಮಿಮೀ ಹೊಂದಿದೆ.
Ex-Showroom ಬೆಲೆ ಎಷ್ಟು?
ಪುಣೆ ಮಾರುಕಟ್ಟೆಯಲ್ಲಿ ಕಂಪನಿ ಈ ಕಾರಿನ ಎಕ್ಸ್-ಷೋರೂಮ್ ಬೆಲೆಯನ್ನು 15.65 ಲಕ್ಷ ರೂ. ನಿಗದಿಪಡಿಸಿದೆ. ಮ್ಯಾನುಯೆಲ್ ಟ್ರಿಮ್ಸ್ ನ ಹೋಲಿಕೆಯಲ್ಲಿ ಆಟೋಮ್ಯಾಟಿಕ್ ಮಾಡೆಲ್ W7, W9 ಹಾಗೂ W11(O)ಗಳ ಮೇಲೆ ಸುಮಾರು 1.21 ಲಕ್ಷ ರೂ. ಬೆಲೆ ಏರಿಕೆಯಾಗಿದೆ. ಹೀಗಾಗಿ ಎಂಟ್ರಿ ಲೆವಲ್ W7 ಬೆಲೆ 17.36 ಲಕ್ಷ ರೂ. W9 ಬೆಲೆ 17.36 ಲಕ್ಷ ರೂ. ಹಾಗೂ W11(O) ಬೆಲೆ 18.88 ಲಕ್ಷ ರೂ. ನಿಗದಿಪಡಿಸಲಾಗಿದೆ.
ಮಹಿಂದ್ರಾ ಬಿಡುಗಡೆಗೊಳಿಸಿರುವ ಈ XUV ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಸ್, ಎಂ.ಜಿ ಹೆಕ್ಟರ್, ಕಿಯಾ ಸೆಲ್ಟಾಸ್ ಹಾಗೂ ಹುಂಡೈ ಕ್ರೆಟಾ ಜೊತೆಗೆ ತೀವ್ರ ಪೈಪೋಟಿ ನಡೆಸಲಿದೆ.