ನವದೆಹಲಿ: ಹಣಕಾಸು ಸಚಿವ ಪಿಯುಶ್ ಗೋಯಲ್, ನರೇಂದ್ರ ಮೋದಿ ಸರ್ಕಾರದ ಕೊನೆಯ ಬಜೆಟ್ ಮಂಡನೆ ಮಾಡುತ್ತಿದ್ದು, ಚುನಾವಣಾಪೂರ್ವ ಬಜೆಟ್ ಇದಾಗಿರುವುದರಿಂದ ನಿರೀಕ್ಷೆಯಂತೆ ಎಲ್ಲ ವರ್ಗಕ್ಕೂ ಕೊಡುಗೆ ನೀಡುತ್ತಿದ್ದಾರೆ. ನಾವು 2022 ರ ಹೊತ್ತಿಗೆ ನವ ಭಾರತವನ್ನು ರಚಿಸುತ್ತೇವೆ ಎಂದ ಪಿಯೂಷ್, ರೈತರಿಗೆ ನೆರವಾಗಲು 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್' ಯೋಜನೆಯನ್ನು ಘೋಷಿಸಲಾಗಿದ್ದು, ರೈತರ ಖಾತೆಗೆ ನೇರವಾಗಿ 6000 ಸಾವಿರ ರೂ. ವರ್ಗಾವಣೆಯಾಗಲಿದೆ ಎಂದು ಘೋಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಯೋಜನೆಯಡಿ ವಾರ್ಷಿಕವಾಗಿ ರೈತರಿಗೆ 6 ಸಾವಿರ ರೂ. ನೇರ ನೆರವು ನೀಡಲಾಗುವುದು. ಪ್ರಧಾನ್ ಕಿಸಾನ್ ಸಮ್ಮಾನ್ ನಿಧಿಗಾಗಿ ಸರ್ಕಾರ 75,000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ಈ ಯೋಜನೆಯ ಪ್ರಯೋಜನಗಳು ಡಿಸೆಂಬರ್ 1, 2018 ರಿಂದ ರೈತರಿಗೆ ಪ್ರಾರಂಭವಾಗುತ್ತವೆ ಎಂದು ಪಿಯೂಷ್ ಘೋಷಿಸಿದರು.


ಮಧ್ಯಂತರ ಬಜೆಟ್ ನಿಂದ ರೈತರಿಗೆ ಸಿಕ್ಕಿದ್ದು ಇಷ್ಟು:


  • ರೈತರ ಕಲ್ಯಾಣಕ್ಕಾಗಿ ಅವರ ಆದಾಯವನ್ನು ದ್ವಿಗುಣಗೊಳಿಸಿ ಮತ್ತು 22 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ.

  • ರೈತರ ಅಕೌಂಟ್ ಗೆ ಎರಡು ಸಾವಿರ ರೂಪಾಯಿ ಹಣ, ದೇಶದ ರೈತರ ಖಾತೆಗೆ ಆರು ಸಾವಿರ ರೂಪಾಯಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಣೆ.

  • ಎರಡು ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿರುವ ರೈತರ ಖಾತೆಗೆ ನೇರವಾಗಿ ಆರು ಸಾವಿರ ರೂ. ಮಂಜೂರು ಮಾಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿ.

  • ಈ ಹಣ ಮೂರು ಕಂತಿನಲ್ಲಿ ರೈತರ ಖಾತೆಗೆ ಜಮಾ ಆಗಲಿದೆ. ಇದನ್ನು ಬೆಳೆ ಕೊಯಲಿಗೂ ಮುನ್ನ ನೀಡುವುದರಿಂದ ರೈತರಿಗೆ ಉಪಯೋಗವಾಗಲಿದೆ ಎಂದು ಹಣಕಾಸು ಸಚಿವರು ತಿಳಿಸಿದರು.