Make In India Booster - ಮೇಕ್ ಇನ್ ಇಂಡಿಯಾವನ್ನು (Make In India) ಉತ್ತೇಜಿಸಲು, ಭಾರತೀಯ ಸೇನೆಯು (Indian Army) 14,000 ಕೋಟಿ ಮೌಲ್ಯದ ಸ್ವದೇಶಿ ಕ್ಷಿಪಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಖರೀದಿಸಲು ನಿರ್ಧರಿಸಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ, ಭಾರತೀಯ ಸೇನೆಯು ಎರಡು ರೆಜಿಮೆಂಟ್‌ಗಳನ್ನು ಆಕಾಶ್-ಎಸ್ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್ (Akash S Air Defence System) ಮತ್ತು 25 ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ಗಳನ್ನು (ALH) ಖರೀದಿಸಲಿದೆ. ಇದಕ್ಕಾಗಿ, ಒಟ್ಟು 14000 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಭಾರತೀಯ ಸೇನೆಯು ರಕ್ಷಣಾ ಸಚಿವಾಲಯಕ್ಕೆ ಈ ಕುರಿತಾದ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ಸರ್ಕಾರಿ ಮೂಲಗಳು ANI ಗೆ ಮಾಹಿತಿ ನೀಡಿವೆ. ಈ ಪ್ರಸ್ತಾವನೆಗೆ ಶೀಘ್ರದಲ್ಲೇ ಅನುಮೋದನೆಯೂ ಸಿಗಬಹುದು. ಈ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ (Defence Minister Rajnath Singh) ಸಿಂಗ್ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸುವ ನಿರೀಕ್ಷೆಯಿದೆ. ಆಕಾಶ್-ಎಸ್ ಆರ್ ಕ್ಷಿಪಣಿ ಸ್ವದೇಶಿ ಅಸ್ತ್ರ ಹಾಗೂ ಆಕಾಶ್ ಕ್ಷಿಪಣಿ ವ್ಯವಸ್ಥೆಯ ಹೊಸ ರೂಪಾಂತರವಾಗಿದೆ ಎಂದು ಮೂಲಗಳು ಹೇಳಿವೆ.


ಇದನ್ನೂ ಓದಿ-Afghanistan Crisis: ಯುಎಸ್ ಸೇರಿದಂತೆ 100 ದೇಶಗಳೊಂದಿಗೆ ತಾಲಿಬಾನ್ ಮಾಡಿಕೊಂಡಿದೆ ಈ ಒಪ್ಪಂದ


30 ಕಿ.ಮೀ ದೂರದಿಂದಲೇ ಶತ್ರುಗಳನ್ನು ಸದೆಬಡಿಯಲಿದೆ
ಆಕಾಶ್-S ಏರ್ ಡಿಫೆನ್ಸ್ ಕ್ಷಿಪಣಿ  25-30 ಕಿಮೀ ದೂರದಿಂದ ಶತ್ರು ವಿಮಾನ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಗುರಿಯಾಗಿಸಲು ಸಮರ್ಥವಾಗಿದೆ. ವಿಶೇಷವೆಂದರೆ ಈ ಕ್ಷಿಪಣಿಗಳು ಲಡಾಖ್ ನಂತಹ ವಿಪರೀತ ಶೀತ ವಾತಾವರಣದಲ್ಲಿ ಶತ್ರುಗಳಿಗೆ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ, ಆಕಾಶ್-ಎಸ್ ಕ್ಷಿಪಣಿಗಳು ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿರುವ ಪರ್ವತ ಮತ್ತು ಇತರ ಪ್ರದೇಶಗಳಲ್ಲಿ ಭಾರತೀಯ ಸೇನೆಯ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಿವೆ.


ಇದನ್ನೂ ಓದಿ-Kabul Airport ಬಳಿ ರಾಕೆಟ್ ದಾಳಿ, ಸ್ಫೋಟದಲ್ಲಿ ಇಬ್ಬರ ಸಾವು, ಮೂವರಿಗೆ ಗಾಯ


ಈ ಮೊದಲೇ ಇವುಗಳನ್ನು ಭಾರತೀಯ ಸೇನೆಗೆ ಸೇರ್ಪಡೆ ಮಾಡಲಾಗಿದೆ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ ವ್ಯವಸ್ಥೆಯು ಈಗಾಗಲೇ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದೆ ಮತ್ತು ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಿತ ಆವೃತ್ತಿಗಳನ್ನು ಅಳವಡಿಸಲು ಯೋಜಿಸಲಾಗಿದೆ. ಡಿಆರ್‌ಡಿಒ ಇತ್ತೀಚೆಗೆ ಆಕಾಶ್ ಅನ್ನು ಪರೀಕ್ಷಿಸಿದೆ-ಆಕಾಶ್ ಕ್ಷಿಪಣಿ ವ್ಯವಸ್ಥೆಗಳ ಹೊಸ ತಲೆಮಾರಿನ ಆವೃತ್ತಿಯಾಗಿದೆ. ಸೇನೆಯು ತನ್ನ ವಾಯುಯಾನ ಸ್ಕ್ವಾಡ್ರನ್‌ಗಳಿಗಾಗಿ 25 ALH ಧ್ರುವ ಮಾರ್ಕ್ 3 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಚಿಂತನೆ ನಡೆಸುತ್ತಿದೆ. ಭಾರತೀಯ ಸೇನೆಯ ಪಟ್ಟಿಯಲ್ಲಿ ಇಂತಹ ಅನೇಕ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ಸೇರಿವೆ, ಇವುಗಳನ್ನು ಇದೀಗ ದೇಶದಲ್ಲಿಯೇ ತಯಾರಿಸಲಾಗುತ್ತಿದೆ.


ಇದನ್ನೂ ಓದಿ-Drugs Case: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ