ಮಾಲೆಗಾಂ ಸ್ಪೋಟ್ ಪ್ರಕರಣ :ಆರೋಪ ಮುಕ್ತಿಗಾಗಿ ಸಲ್ಲಿಸಿದ್ದ ಸಾಧ್ವಿ ಪ್ರಜ್ಞಾ ಮತ್ತು ಪುರೋಹಿತ್ ಅರ್ಜಿ ವಜಾ
ನವದೆಹಲಿ: 2008 ರಲ್ಲಿ ಮಾಲೆಗಾಂ ನಲ್ಲಿ ಸಂಭವಿಸಿದ್ದ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಪ್ರಸಾದ್ ಪುರೋಹಿತ್ ಮತ್ತು ಸಾಧ್ವಿ ಪಜ್ನಾ ರವರನ್ನು ಆರೋಪದಿಂದ ಮುಕ್ತಗೊಳಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಎನ್ಐಎ ನ್ಯಾಯಾಲಯ ತಿರಸ್ಕರಿಸಿದೆ.
ಆದರೆ ಸಾದ್ವಿ ಪರ್ಜ್ನಾ, ಸಮೀರ್ ಕುಲಕರ್ಣಿ, ಸುಧಾಕರ್ ದ್ವಿವೇದಿ, ರಮೇಶ್ ಉಪಾದ್ಯಾಯ ಮತ್ತು ದ್ವಿವೇಧಿ ವಿರುದ್ದ ದಾಖಲಾಗಿದ್ದ ಮೋಕ ದೊಷಾರೋಪವನ್ನು ನ್ಯಾಯಾಲಯ ವಜಾಗೊಳಿಸಿದೆ,ಇವರ ವಿರುದ್ದ ಐಪಿಸಿ ಸೆಕ್ಷನ್ 18 ಅಡಿಯಲ್ಲಿ ದೊಶಾರೊಪವನ್ನು ದಾಖಲಿಸಲು ನಿರ್ದೇಶನ ನೀಡಿದೆ, ರಾಕೇಶ್ ಧಾವೆ ಮತ್ತು ಜಗದೀಶ್ ವಿರುದ್ದದ ವಿಚಾರಣೆಯು ಶಸ್ತ್ರಾಸ್ತ್ರ ಕಾಯ್ದೆಗೆ ಮಾತ್ರ ಸಿಮಿತವಾಗಿರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
2008 ರಲ್ಲಿ ಮಾಲೆಗಾಂ ನ ಭಿಕ್ಕು ಚೌಕದ ಬಳಿ ಬಾಂಬ್ ಸ್ಪೋಟಗೊಂಡು ಸುಮಾರು 6 ಮಂದಿ ಮೃತಪಟ್ಟು 101 ಜನರು ಗಾಯಗೊಂಡಿದ್ದರು.