ನವದೆಹಲಿ: ಯಾವಾಗಲು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಂಬಂಧ, ಫಿಟ್ನೆಸ್ ವಿಡಿಯೋ ಹಾಗೂ ಹಸಿಬಿಸಿ ಚಿತ್ರಗಳನ್ನು ಹರಿಬಿಟ್ಟು ಸುದ್ದಿ ಮಾಡುವ ಖ್ಯಾತ ಬಾಲಿವುಡ್ ನಟಿ ಮಲೈಕಾ ಆರೋರಾ, ಹೊಸ ವರ್ಷ ಆರಂಭವಾಗುತ್ತಿದ್ದಂತೆ ಮೋಹಕ  ಫೋಟೋಶೂಟ್ ನಡೆಸಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ತನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ದೀರ್ಘ ಕಾಲದಿಂದ ಬೆಳ್ಳಿ ಪರದೆಯಿಂದ ದೂರವಿರುವ ಮಲೈಕಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಅವರು, ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮದ ಮೇಲೆ ಭಾರೀ ವೈರಲ್ ಆಗಿವೆ. 


COMMERCIAL BREAK
SCROLL TO CONTINUE READING


ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಮಲೈಕಾ ಹಂಚಿಕೊಂಡಿರುವ ಈ ಫೋಟೋಗಳಲ್ಲಿ ಅವರು ಹಸಿರು ಬಣ್ಣದ ಟಚ್ ಇರುವ ಉಡುಗೆಯನ್ನು ತೊಟ್ಟಿದ್ದಾರೆ.



ಈ ಉಡುಗೆಯಲ್ಲಿ ಮಲೈಕಾ ನೀಡಿರುವ ಲುಕ್ ಅನ್ನು ಅವರ ಅಭಿಮಾನಿಗಳು ಭಾರೀ ಮೆಚ್ಚುಕೊಂಡಿದ್ದಾರೆ. ಮಲೈಕಾ ಹರಿಬಿಟ್ಟ ಈ ಫೋಟೋಗಳಿಗೆ ಕೆಲವೇ ಗಂಟೆಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.



ಇದಕ್ಕೂ ಮುನ್ನ ಗೋಲ್ಡನ್ ಕಲರ್ ಉಡುಪು ಧರಿಸಿದ ಫೋಟೋವೊಂದನ್ನು ಸಹ ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಮಲೈಕಾ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು.



ಅಷ್ಟೇ ಅಲ್ಲ ಹೊಸ ವರ್ಷದ ಆರಂಭದ ಮೊದಲ ದಿನವೇ ತನ್ನ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಅವರನ್ನು ಮುತ್ತಿಕ್ಕಿದ ಮಲೈಕಾ, ಬಳಿಕ ಆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸುದ್ದಿ ಮಾಡಿದ್ದರು.