ಮಾಲ್ಡಾ: ಮಕ್ಕಳು ನಾಣ್ಯ ನುಂಗಿರುವ ಬಗ್ಗೆ ಕೇಳಿರುತ್ತೇವೆ. ಕೆಲವೊಮ್ಮೆ ಅಂತಹ ಘಟನೆಗಳು ನಮ್ಮ ಕಣ್ಮುಂದೆಯೇ ನಡೆದಿರುತ್ತವೆ. ಇಂತಹ ಘಟನೆಗಳು ಬೇರೆ ಪ್ರದೇಶಗಳಲ್ಲಿ ನಡೆದಿರುತ್ತವೆ. ಆದರೆ ಕಾಕತಾಳಿಯ ಎಂಬಂತೆ ಮಾಲ್ಡಾ ಜಿಲ್ಲೆ ಒಂದರೆಲ್ಲೇ ಮೂವರು ಮಕ್ಕಳ ಗಂಟಲಲ್ಲಿ ನಾಣ್ಯ ಸಿಲುಕಿದ್ದ ಬಗ್ಗೆ ವರದಿಯಾಗಿದೆ. ಅದರಲ್ಲೇನಪ್ಪ ಕಾಕತಾಳಿಯ ಮೂರು ಮಕ್ಕಳು ಒಂದೇ ದಿನ ನಾಣ್ಯ ನುಂಗಿರಬಹುದು ಅನ್ಕೊತಾ ಇದ್ದೀರಾ... ಆ ಮೂರು ಮಕ್ಕಳ ಗಂಟಲಿನಲ್ಲಿ ಸಿಲುಕಿದ್ದದ್ದು 5 ರೂ. ನಾಣ್ಯ.


COMMERCIAL BREAK
SCROLL TO CONTINUE READING


ಮಾಲ್ಡಾ ಜಿಲ್ಲೆಯ ಮೂವರು ಮಕ್ಕಳು ನಾಣ್ಯ ನುಂಗಿ ಉಸಿರಾಟಕ್ಕೆ ತೊಂದರೆಯುಂಟಾಗಿದೆ. ಬಳಿಕ ಮೂವರು ಮಕ್ಕಳನ್ನು ಮಾಲ್ಡಾ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಶಸ್ತ್ರ ಚಿಕಿತ್ಸೆ ಬಳಿಕ ಮಕ್ಕಳ ಗಂಟಲಲ್ಲಿ ಸಿಲುಕಿದ್ದ ನಾಣ್ಯವನ್ನು ತೆಗೆಯಲಾಗಿದೆ. ಸದ್ಯ, ಮೂವರು ಮಕ್ಕಳು ಆರೋಗ್ಯವಾಗಿದ್ದು, ಮಾಲ್ಡಾ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಈ ಮೂರು ಮಕ್ಕಳು ಬೇರೆ-ಬೇರೆ ಪ್ರದೇಶಕ್ಕೆ ಸೇರಿದವರು ಎನ್ನಲಾಗಿದೆ. ವೈದ್ಯಕೀಯ ಕಾಲೇಜು ಮೂಲಗಳ ಪ್ರಕಾರ, ಕಲೈಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲೈಚೋಕ್ ಗ್ರಾಮದಲ್ಲಿ ವಾಸಿಸುವ ಮಿಂಟು ಶೇಕ್ ಎಂಬುವರ ಆರು ವರ್ಷದ ಮಗ ನಬಾಬ್ ಬಹದ್ದೂರ್ ಶೇಕ್ 5 ರೂಪಾಯಿ ನಾಣ್ಯವನ್ನು ನುಂಗಿದ್ದಾನೆ. ಅದೇ ಸಮಯದಲ್ಲಿ, ಇನ್ನೊಂದು ಘಟನೆ ಅಂಗ್ರೆಜ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಬರಾಕ್ ಕಾಲೊನಿ ಪ್ರದೇಶದಲ್ಲಿ ವಾಸವಾಗಿದ್ದ ರಂಜಿತ್ ಸಹಾ ಎಂಬುವವರ 3 ವರ್ಷದ ಮಗಳು ಆಯುಷಿ ಸಹ 5 ರೂ. ನಾಣ್ಯವನ್ನು ನುಂಗಿದ್ದಾರೆ. ತಕ್ಷಣ ಇಬ್ಬರು ಮಕ್ಕಳನ್ನು ಮಾಲ್ಡಾ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಯಾವುದೇ ಅಡಚಣೆಯಿಲ್ಲದೆ ವೈದ್ಯರು ಆ ಮಕ್ಕಳ ಗಂಟಲಿನಿಂದ ನಾಣ್ಯಗಳನ್ನು ಹೊರತೆಗೆದಿದ್ದಾರೆ.



ವೈದ್ಯಕೀಯ ಕಾಲೇಜು ಮೂಲಗಳ ಪ್ರಕಾರ, ಈ ಇಬ್ಬರೂ ಮಕ್ಕಳ ಶಸ್ತ್ರ ಚಿಕಿತ್ಸೆ ಮುಗಿಯುತ್ತಿದ್ದಂತೆ ಅಂತಹದ್ದೇ ಮತ್ತೊಂದು ಪ್ರಕರಣ ದಾಖಲಾಗಿದೆ. ದಕ್ಷಿಣ ದಿನಾಜ್ಪುರ್ ಜಿಲ್ಲೆಯಲ್ಲಿ ವಾಸಿಸುವ ಅಮಿತ್ ಭಟ್ ಎಂಬುವವರ 4 ವರ್ಷದ ಮಗ ಆಕಾಶ್ ಭಟ್ ಆಟವಾಡುತ್ತಾ 5 ರೂ. ನಾಣ್ಯ ನುಂಗಿದ್ದರು. ಆ ನಾಣ್ಯ ಉಸಿರಾಟದ ನಾಳದ ಮೂಲಕ ಹೊಟ್ಟೆ ಸೇರಿತ್ತು ಎನ್ನಲಾಗಿದೆ. ಡಯಾಲಿಸಿಸ್ ಮಾಡುವ ಮೂಲಕ ಆ ನಾಣ್ಯವನ್ನು ಹೊರತೆಗೆಯಲಾಗಿದೆ.


ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡುವುದು ಒಳ್ಳೆಯದಲ್ಲಿ. ಹಾಗಾಗಿ ಸಾಧ್ಯವಿದ್ದರೆ ಡಯಾಲಿಸಿಸ್ ಮಾಡುವ ಮೂಲಕ ನಾಣ್ಯವನ್ನು ಹೊರತೆಗೆಯಲಾಗುತ್ತದೆ ಎಂದು ವೈದ್ಯಕೀಯ ಕಾಲೇಜಿನ ವೈದ್ಯರು ತಿಳಿಸಿದ್ದಾರೆ.



ಭಾನುವಾರ ಸಂಜೆ ತಮ್ಮ ಮಗ ನವಾಬ್ ಬಹದ್ದೂರ್ ಆಟವಾಡುತ್ತಾ ನಾಣ್ಯ ನುಂಗಿದ. ಅದನ್ನು ಹೊರತೆಗೆಯಲು ಪ್ರಯತ್ನಿಸುವ ವೇಳೆ ನಮ್ಮ ಅವಿವೇಕದ ಕಾರಣದಿಂದಾಗಿ ನಾಣ್ಯ ಮಗನ ಗಂಟಲಿನಲ್ಲಿ ಸಿಲುಕಿತು. ಬಳಿಕ ಮಗು ಜೋರಾಗಿ ಅಳಲು ಆರಂಭಿಸಿತು. ನಂತರ ಮಾಲ್ಡಾ ಮೆಡಿಕಲ್ ಕಾಲೇಜಿನಲ್ಲಿ ಮಗುವನ್ನು ದಾಖಲಿಸಲಾಯಿತು ಎಂದು ಮೆಂಟೂ ಶೇಕ್ ಮತ್ತು ಅವರ ಪತ್ನಿ ರಹೀಂ ಬಿಬಿ ಘಟನೆ ಬಗ್ಗೆ ತಿಳಿಸಿದ್ದಾರೆ.