ಹೂಗ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮತ್ತೆ ಗುಟುರು ಹಾಕಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೋದಿಯವರನ್ನು ದಂಗೆಕೋರ ಎಂದು ಕರೆದಿದ್ದಾರೆ.


COMMERCIAL BREAK
SCROLL TO CONTINUE READING

ಗೂಗ್ಲಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ(Narendra modi) ಒಬ್ಬ ದೇಶದ ದೊಡ್ಡ ದಂಗಾಬಾಝ್‌ (ದಂಗೆಕೋರ) ಎಂದು ಕಿಡಿ ಕಾರಿದ್ದಾರೆ.


Petrol-Diesel ಬೆಲೆ ಚಿಂತೆ ಬಿಟ್ಟು ಎಲೆಕ್ಟ್ರಿಕ್ ವಾಹನ ಖರೀದಿಸಿ, ಎಷ್ಟು ಲಕ್ಷ ಸಬ್ಸಿಡಿ ಸಿಗುತ್ತೆ ಗೊತ್ತಾ?


ಅಲ್ಲದೇ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್(Donald Trump)‌ಗೆ ಬಂದ ಅದೇ ದುರ್ಗತಿ ಪ್ರಧಾನಿ ನರೇಂದ್ರ ಮೋದಿಗೂ ಬರಲಿದೆ ಎಂದು ದೀದಿ ಭವಿಷ್ಯ ನುಡಿದಿದ್ದಾರೆ.


ಕಲ್ಲಿದ್ದಲು ಕಳ್ಳ ಸಾಗಣಿಕೆ ಪ್ರಕರಣದಲ್ಲಿ ತಮ್ಮ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ(Abhishek Banerjee) ಅವರ ಪತ್ನಿ ರುಜಿಯಾ ಬ್ಯಾನರ್ಜಿ ಅವರನನ್ನು ಸಿಬಿಐ ವಿಚಾರಣೆ ನಡೆಸಿದ ಬೆನ್ನಲ್ಲೇ ಮಮತಾ ಅವರಿಂದ ಈ ಕಟು ಟೀಕೆಗಳು ಹೊರ ಬಿದ್ದಿವೆ.


Narendra Modi Stadium: ವಿಶ್ವದ ಅತಿದೊಡ್ಡ ಕ್ರಿಕೆಟ್‌ ಮೈದಾನಕ್ಕೆ 'ನರೇಂದ್ರ ಮೋದಿ' ಹೆಸರು..!


2019ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ದೀದಿ ಸರ್ಕಾರವನ್ನು ತೋಲಾಬಾಝ್‌ (ಗುಂಪಿನಲ್ಲಿ ಲೂಟಿ ಮಾಡುವವರು) ಎಂದು ಜರೆದಿದ್ದರು.


ಇದಾದ ಬಳಿಕ ರಾಜ್ಯದ ಬಿಜೆಪಿ(BJP) ನಾಯಕರೂ ಕೂಡ ಸರ್ಕಾರವನ್ನು ಇದೇ ಹೆಸರಿನಿಂದ ಟೀಕೆ ಮಾಡುತ್ತಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ವಿರುದ್ದವೇ ದಂಗೆಕೋರ ಎಂದು ಸಿಡಿಗುಂಡು ಸಿಡಿಸಿದ್ದಾರೆ.


ಶಾಲೆಯಲ್ಲಿ ಒಂದೇ ದಿನದಲ್ಲಿ 14 ಮಕ್ಕಳಿಗೆ Corona Positive


ಅಲ್ಲದೇ ಮುಂದಿನ ವಿಧಾನಸಭಾ ಚುನವಣೆ(Election)ಗೆ ನಾನೇ ಗೋಲ್‌ ಕೀಪರ್‌ ಎಂದಿರುವ ದೀದಿ, ಬಿಜೆಪಿಗೆ ಒಂದೇ ಒಂದು ಗೋಲ್‌ ಸಂಪಾದಿಸಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.


ಅಲ್ಲದೇ ನೀವು ನನ್ನನ್ನು ಕೊಲ್ಲಬಹುದು. ಬಡಿಯಬಹುದು. ಆದರೆ ಮನೆಯಲ್ಲಿರುವ ನನ್ನ ಸೊಸೆಯನ್ನೇಕೆ ಅವಮಾನಿಸಿದ್ದೀರಿ ಎಂದು ಮಮತಾ(Mamata Banerjee) ಖಾರವಾಗಿ ಪ್ರಶ್ನೆ ಮಾಡಿದ್ದಾರೆ.


Maharashtra: ಮತ್ತೆ ಕರೋನಾ ಆತಂಕ, ಪೊಲೀಸ್ ಸಿಬ್ಬಂದಿಗೂ Work from Home


ನೀವು ತಾಯಂದಿರು ಹಾಗೂ ಹೆಣ್ಣು ಮಕ್ಕಳನ್ನು ಕಳ್ಳರೆಂದು ಕರೆಯುತ್ತೀರಾ. ನನಗೆ ಎಲ್ಲವೂ ಗೊತ್ತಿದೆ. ಹೆಚ್ಚಿನದ್ದೇನು ಹೇಳಲು ಹೋಗುವುದಿಲ್ಲ ಎಂದು ದೀದಿ ಹೇಳಿದ್ದಾರೆ.


ದೇಶವನ್ನು ದೈತ್ಯ ವ್ಯಕ್ತಿ ಆಳ್ವಿಕೆ ನಡೆಸುತ್ತಿದ್ದಾರೆ. ಅವರು ನಮ್ಮ ತಲೆ ಬುರುಡೆ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರು ಬಂಗಾಳದ ಮೇಲೆ ದಾಳಿ ಮಾಡಿ ಕಬ್ಜಾ ಮಾಡಲು ಯತ್ನಿಸುತ್ತಿದ್ದಾರೆ. ನಿಮಗೆ ಬಂಗಾಳ ಬೇಕಾ? ಬಂಗಾಳವನ್ನು ಗುಜರಾತ್‌ ಆಳ್ವಿಕೆ ಮಡಲು ಅನುಮತಿಸುವುದಿಲ್ಲ ಎಂದು ಗುಡುಗಿದ್ದಾರೆ.


Yamuna Expresswayನಲ್ಲಿ ಭೀಕರ ಅಪಘಾತ, ಕಾರಿನ ಮೇಲೆ ಟ್ಯಾಂಕರ್ ಪಲ್ಟಿ, 7 ಮಂದಿ ಮೃತ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.