ಕೋಲ್ಕತಾ: ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ಕಾಂಗ್ರೆಸ್ ಮಂಗಳವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ. 


COMMERCIAL BREAK
SCROLL TO CONTINUE READING

ರಾಜಕೀಯ ಪಕ್ಷಗಳು ತಾವು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಜಾರಿಗೊಳಿಸುವಲ್ಲಿ ಗಮನಹರಿಸಬೇಕು. ಹಿಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿರುವ ಬಗ್ಗೆ ಮಾತನಾಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಒಂದು ರಾಜಕೀಯ ಪಕ್ಷದ ಪ್ರಣಾಳಿಕೆಯು ಆ ಪಕ್ಷದ 'ವಿಶನ್ ಡಾಕ್ಯುಮೆಂಟ್' ಆಗಿರುತ್ತದೆ. ಹಾಗಾಗಿ ಎಲ್ಲ ಪಕ್ಷಗಳು ಜನರ ವಿಶ್ವಾಸ ಗಳಿಸಲು ತಮ್ಮ ಭರವಸೆಗಳನ್ನು ಪೂರೈಸುವುದು ಅತ್ಯಗತ್ಯ ಎಂದಿದ್ದಾರೆ. 


ಮುಂದುವರೆದು ಮಾತನಾಡುತ್ತಾ, "ಪ್ರಣಾಳಿಕೆಯು ಪಕ್ಷದ ಸಿದ್ಧಾಂತವನ್ನು ತೋರಿಸುತ್ತದೆ, ಇದರಿಂದ ಪಕ್ಷಗಳು ತಮ್ಮ ಆದ್ಯತೆಗಳನ್ನು ನೋಡಿಕೊಳ್ಳಬೇಕು. ನಮ್ಮ ಪಕ್ಷದ ಪೂರ್ಣ ಪ್ರಣಾಳಿಕೆಯನ್ನು ಗಮನಿಸಿ. ನಾವು 200ಕ್ಕೂ ಅಧಿಕ ಭರವಸೆಗಳನ್ನು ಪೂರೈಸಿದ್ದೇವೆ" ಎಂದು ಮಮತಾ ಹೇಳಿದರು.