GST ಅನ್ನು `ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್` ಎಂದು ಬಣ್ಣಿಸಿದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ನರೇಂದ್ರ ಮೋದಿ ಸರ್ಕಾರ ಇಂದು ಮಾತನಾಡುತ್ತಿರುವ ಏಕ ರೀತಿ ತೆರಿಗೆ GST, ಜನರನ್ನು ಕಿರುಕುಳ ಮಾಡಲು ಮತ್ತು ಆರ್ಥಿಕತೆಯನ್ನು ಹಾಳುಗೆಡವಲು ಜನರನ್ನು ದಾರಿತಪ್ಪಿಸಲು ಗ್ರೇಟ್ ಸೇಲ್ಫಿಶ್ ತೆರಿಗೆ (ಜಿಎಸ್ಟಿ) ಎಂದು ಟೀಕಿಸಿದ್ದಾರೆ.
ಕೊಲ್ಕತ್ತಾ: ಪಶ್ಚಿಮ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನರೇಂದ್ರ ಮೋದಿ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಗ್ರೇಟ್ ಸೇಲ್ಫಿಶ್ ತೆರಿಗೆ ಎಂದು ಬಣ್ಣಿಸಿದ್ದಾರೆ.
ಪಶ್ಚಿಮ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, GST ಅನ್ನು ದೇಶದ ಆರ್ಥಿಕತೆಯನ್ನು ನಾಶಮಾಡುವ ಮತ್ತು ಜನರನ್ನು ಕಿರುಕುಳ ಮಾಡುವ ಗ್ರೇಟ್ ಸೇಲ್ಫಿಶ್ ತೆರಿಗೆ ಎಂದು ಟೀಕಿಸಿದ್ದಾರೆ. ನವೆಂಬರ್ 8 ರಂದು ನೋಟು ಅಮಾನೀಕರಣವನ್ನು ವಿಮೋಚನೆಯ ವಿಪತ್ತು ಎಂದು ಕರೆದಿರುವ ಮಮತಾ, ಆ ದಿನ ಸಾಮಾಜಿಕ ಜಾಲ ತಾಣಗಳಲ್ಲಿ ಬಳಕೆದಾರರು ಪ್ರೊಫೈಲ್ಗಳನ್ನು ಬದಲಿಸುವ ಮೂಲಕ ಕರಾಳ ದಿನವನ್ನಾಗಿ ಆಚರಿಸಬೇಕು ಎಂದು ಹೇಳಿದ್ದಾರೆ.
GST ಯೊಂದಿಗೆ ವ್ಯವಹರಿಸುವಾಗ ಭಾರತ ಸರ್ಕಾರ ವಿಫಲವಾಗಿದೆ. ಜನರನ್ನು ಕಿರುಕುಳ ಮಾಡುವ ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್ (ಜಿಎಸ್ಟಿ) ಉದ್ಯೋಗಗಳನ್ನು ಕಸಿದುಕೊಳ್ಳುವ, ವ್ಯವಹಾರವನ್ನು ಹಾನಿಗೊಳಿಸುವ, ಆರ್ಥಿಕತೆಯನ್ನು ಹಾಳುಮಾಡುವ ತೆರಿಗೆ ವ್ಯವಸ್ಥೆ ಎಂದು ಟ್ವಿಟ್ಟರ್ನಲ್ಲಿ ಅವರು ಹೇಳಿದ್ದಾರೆ.
ಮುಂದಿನ ಟ್ವೀಟ್ನಲ್ಲಿ, ಮುಖ್ಯಮಂತ್ರಿ 'ನೋಟು ಅಮಾನೀಕರಣ ಒಂದು ವಿಪತ್ತು ಎಂದು ಹೇಳಿದರು. ದೇಶದ ಆರ್ಥಿಕತೆಯನ್ನು ಹಾಳುಗೆಡವಿದ ಈ ದಿನದಂದು ನಮ್ಮ ಟ್ವೀಟರ್ ಖಾತೆಯ ಪ್ರೊಫೈಲ್ ಚಿತ್ರವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸುವ ಮೂಲಕ ನವೆಂಬರ್ 8ನ್ನು 'ಕರಾಳ ದಿನ'ವಾಗಿ ಆಚರಿಸೋಣ ಎಂದು ತಿಳಿಸಿದ್ದಾರೆ.