ಕೋಲ್ಕತಾ: ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿ ಸರ್ಕಾರ ಮತ್ತೊಂದು ಬಿಕ್ಕಟ್ಟಿನಲ್ಲಿ ಸಿಲುಕಿದೆ. ಹಗರಣದಲ್ಲಿ ಭಾಗಿಯಾಗಿರುವ ತಾರಾ ಟಿವಿ ಕಂಪನಿಯ ಉದ್ಯೋಗಿಗಳಿಗೆ ಸಿಎಂ ರಿಲೀಫ್ ಫಂಡ್‌ನ ಹಣದಿಂದ ಮಮತಾ ಸರ್ಕಾರ ಸಂಬಳ ನೀಡಿದೆ ಎಂದು ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ.


COMMERCIAL BREAK
SCROLL TO CONTINUE READING

ಒಟ್ಟು 23 ತಿಂಗಳವರೆಗೆ 6.21 ಕೋಟಿ ರೂ.
ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ತಾರಾ ಟಿವಿ ಕಂಪನಿಯ ನೌಕರರ ವೇತನಕ್ಕಾಗಿ 2013ರ ಮೇ ನಿಂದ 2015ರ ಏಪ್ರಿಲ್ ನಡುವೆ ಸಿಎಂ ರಿಲೀಫ್ ಫಂಡ್‌ನಿಂದ 27 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ಸಿಬಿಐ ನ್ಯಾಯಾಲಯದಲ್ಲಿ ತಿಳಿಸಿದೆ. ಈ ಅವಧಿಯಲ್ಲಿ ತಾರಾ ಟಿವಿ ನೌಕರರ ಕಲ್ಯಾಣ ಸಂಘಕ್ಕೆ 6.21 ಕೋಟಿ ರೂ. ನೀಡಲಾಗಿದೆ. ಖಾಸಗಿ ಕಂಪನಿಯ ಉದ್ಯೋಗಿಗಳಿಗೆ ಸರ್ಕಾರದ ನಿಧಿಯಿಂದ ಸಂಬಳ ನೀಡಿರುವ ಮೊದಲ ಪ್ರಕರಣ ಇದಾಗಿಗೆ ಎಂದು ಸಿಬಿಐ (CBI) ತಿಳಿಸಿದೆ.


ಖಾಸಗಿ ಕಂಪನಿ ಉದ್ಯೋಗಿಗಳಿಗೆ ಸರ್ಕಾರಿ ಹಣದಿಂದ ಸಂಬಳ:
ಕಂಪನಿಯ ನಿಧಿಯಿಂದ ವೇತನ ಪಾವತಿಸುವಂತೆ ಕಲ್ಕತ್ತಾ ಹೈಕೋರ್ಟ್ ನೌಕರರನ್ನು ಕೇಳಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ ಬಂಗಾಳ ಸರ್ಕಾರ ಸಿಎಂ ರಿಲೀಫ್ ಫಂಡ್‌ನ (CM Relief Fund) ಹಣವನ್ನು ನೀಡಿತು. ಸಿಎಂ ರಿಲೀಫ್ ಫಂಡ್‌ನಲ್ಲಿನ ವಿಪತ್ತು ಮತ್ತು ಇತರ ತುರ್ತು ಪರಿಸ್ಥಿತಿಗಳಿಗಾಗಿ ಸಾರ್ವಜನಿಕರಿಂದ ಹಣವನ್ನು ದೇಣಿಗೆ ನೀಡಲಾಗುತ್ತದೆ. ಆದರೆ ಈ ಮೊತ್ತವನ್ನು ದುರುಪಯೋಗಪಡಿಸಿಕೊಂಡು ಕಂಪನಿಯ ಉದ್ಯೋಗಿಗಳಿಗೆ ಸಂಬಳ ನೀಡಲಾಯಿತು. ಈ ವಿಷಯದಲ್ಲಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಿಂದ ಮಾಹಿತಿ ಕೋರಲಾಗಿದೆ ಎಂದು ಸಿಬಿಐ ಹೇಳಿದೆ. ಆದರೆ ರಾಜ್ಯ ಸರ್ಕಾರವು ಅರ್ಧದಷ್ಟು ದಾಖಲೆಗಳನ್ನು ಮಾತ್ರ ಒದಗಿಸಿದೆ ಎಂದು ಆರೋಪಿಸಲಾಗಿದೆ.


ಇದನ್ನೂ ಓದಿ: 'ಸರ್ಕಾರಿ ಶಾಲೆ, ಮದರಸಾ ಮಕ್ಕಳ ಖಾತೆಗೆ ₹ 10 ಸಾವಿರ ಜಮಾ'


ಕಂಪನಿಯು ಶಾರದಾ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿದೆ:
2460 ಕೋಟಿ ರೂ.ಗಳ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಮತಾ ಬ್ಯಾನರ್ಜಿ (Mamata banerjee) ಸರ್ಕಾರ ಈಗಾಗಲೇ ಆರೋಪ ಎದುರಿಸುತ್ತಿದೆ. ಶಾರದಾ ಹಗರಣದ ತನಿಖೆಯನ್ನು ಇತರ ಚಿಟ್ ಫಂಡ್ ಪ್ರಕರಣಗಳೊಂದಿಗೆ ಸುಪ್ರೀಂ ಕೋರ್ಟ್ 2014 ರಲ್ಲಿ ಸಿಬಿಐಗೆ ಹಸ್ತಾಂತರಿಸಿತು. ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಕೂಡ ಈ ಪ್ರಕರಣದ ಆರೋಪಿ. ಜಾಮೀನು ಪಡೆದಾಗಿನಿಂದ ರಾಜೀವ್ ಕುಮಾರ್ ತನಿಖೆಯಲ್ಲಿ ಸಹಕರಿಸುತ್ತಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳಿರುವ ಹಿನ್ನಲೆಯಲ್ಲಿ ಆತನ ಬಂಧನ ಅಗತ್ಯ ಎಂದು ಸಿಬಿಐ ನ್ಯಾಯಾಲಯದಲ್ಲಿ ತಿಳಿಸಿದೆ.


ಇದನ್ನೂ ಓದಿ: ಬಿಜೆಪಿ ನಾಯಕತ್ವವನ್ನು ಹಿಟ್ಲರ್ ಮತ್ತು ಮುಸೊಲಿನಿಗೆ ಹೋಲಿಸಿದ ಮಮತಾ ಬ್ಯಾನರ್ಜೀ


ನಕಲಿ ಯೋಜನೆ ನಡೆಸುವ ಮೂಲಕ 2460 ಕೋಟಿ ರೂಪಾಯಿ ಹಗರಣ:
ಶಾರದಾ ಚಿಟ್ ಫಂಡ್ (Sharda Chit Fund) ಗ್ರೂಪ್ ಪಶ್ಚಿಮ ಬಂಗಾಳದಲ್ಲಿ ಹಲವಾರು ನಕಲಿ ಯೋಜನೆಗಳನ್ನು ನಡೆಸುತ್ತಿದೆ ಎಂಬ ಆರೋಪವಿದೆ. ಈ ಯೋಜನೆಗಳು ಲಕ್ಷಾಂತರ ಜನರಿಗೆ ವಂಚಿಸಿದೆ ಎಂದು ಆರೋಪಿಸಲಾಗಿದೆ. ವರದಿಗಳ ಪ್ರಕಾರ ಶಾರದಾ ಗ್ರೂಪ್‌ನ ನಾಲ್ಕು ಕಂಪನಿಗಳನ್ನು ಸ್ಥಿರ ಠೇವಣಿ, ಮರುಕಳಿಸುವ ಠೇವಣಿ ಮತ್ತು ಮಾಸಿಕ ಆದಾಯ ಠೇವಣಿ ಎಂಬ ಯೋಜನೆಗಳಲ್ಲಿ ಹಣವನ್ನು ಬೇರೆಡೆಗೆ ತಿರುಗಿಸಲು ಬಳಸಲಾಗುತ್ತಿತ್ತು. ಪಶ್ಚಿಮ ಬಂಗಾಳ ಪೊಲೀಸ್ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ತನಿಖಾ ವರದಿಯಲ್ಲಿ 80 ಪ್ರತಿಶತದಷ್ಟು ಠೇವಣಿದಾರರ ಹಣವನ್ನು ಇನ್ನೂ ಪಾವತಿಸಬೇಕಾಗಿದೆ ಎಂದು ತಿಳಿದುಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.