ಕೊಲ್ಕತ್ತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗ್ರಾಮೀಣ ಪಶ್ಚಿಮ ಬಂಗಾಳವನ್ನು ಮಲವಿಸರ್ಜನೆ ಮುಕ್ತ (ಒಡಿಎಫ್) ಎಂದು ಘೋಷಿಸಿದ್ದಾರೆ ಮತ್ತು ತೃಣಮೂಲ ಕಾಂಗ್ರೆಸ್ ಸರ್ಕಾರವು ಈಗ ಘನತ್ಯಾಜ್ಯ ನಿರ್ವಹಣೆಯತ್ತ ಗಮನ ಹರಿಸಲಿದೆ ಎಂದು ಹೇಳಿದರು.



COMMERCIAL BREAK
SCROLL TO CONTINUE READING

ಅಕ್ಟೋಬರ್ 2 ರೊಳಗೆ ಎಲ್ಲಾ ಗ್ರಾಮಗಳನ್ನು ಮುಕ್ತ ಮಲವಿಸರ್ಜನೆ ಮುಕ್ತ (ಒಡಿಎಫ್) ಮಾಡುವ ಗುರಿಯನ್ನು ಹೊಂದಿರುವ 'ಮಿಷನ್ ನಿರ್ಮಲ್ ಬಾಂಗ್ಲಾ' ಗ್ರಾಮೀಣ ಬಂಗಾಳದ ಸುಮಾರು 1.35 ಕೋಟಿ ಕುಟುಂಬಗಳನ್ನು ಒಳಗೊಂಡಿದೆ ಎನ್ನಲಾಗಿದೆ.



"ಗ್ರಾಮೀಣ ಬಂಗಾಳವು ಈಗ ಮಲವಿಸರ್ಜನೆ ಮುಕ್ತವಾಗಿದೆ ಎಂದು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ನಮ್ಮ ಧ್ಯೇಯವಾದ ಸ್ವಚ್ಚ ಮತ್ತು ಹಸಿರು ಪರಿಸರ ಮತ್ತು ಸುರಕ್ಷಿತ ಜೀವನಕ್ಕಾಗಿ ನಾವು ಮಾಡಿದ ಸಾಧನೆಯನ್ನು ಭಾರತ ಸರ್ಕಾರ ಧೃಡಪಡಿಸಿದೆ  ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. "ನಮ್ಮ ಮುಂದಿನ ಗಮನ ಘನ ತ್ಯಾಜ್ಯ ನಿರ್ವಹಣೆ ಆಗಿರುತ್ತದೆ" ಎಂದು ಅವರು ಹೇಳಿದರು.