ಕೋಲ್ಕತ್ತಾದಲ್ಲಿಂದು ಮಮತಾ ನೇತೃತ್ವದಲ್ಲಿ ಬೃಹತ್ ರ್ಯಾಲಿ
2021 ರ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಮಮತಾ ಬ್ಯಾನರ್ಜೀ ಇಂದು ಟಿಎಂಸಿ ಆಯೋಜಿಸಿರುವ ಮೆಗಾ ಹುತಾತ್ಮ ರ್ರ್ಯಾಲಿ ಮೂಲಕ ಚುನಾವಣಾ ರಣಕಹಳೆ ಊದಲಿದಾರೆ ಎನ್ನಲಾಗಿದೆ.
ನವದೆಹಲಿ: 2021 ರ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಮಮತಾ ಬ್ಯಾನರ್ಜೀ ಇಂದು ಟಿಎಂಸಿ ಆಯೋಜಿಸಿರುವ ಮೆಗಾ ಹುತಾತ್ಮ ರ್ರ್ಯಾಲಿ ಮೂಲಕ ಚುನಾವಣಾ ರಣಕಹಳೆ ಊದಲಿದಾರೆ ಎನ್ನಲಾಗಿದೆ.
1993 ರಲ್ಲಿ ಮಮತಾ ಬ್ಯಾನರ್ಜಿ ಅವರ ರ್ಯಾಲಿ ವೇಳೆ ನಡೆದ ಪೋಲೀಸರ ಗುಂಡಿನ ದಾಳಿಯಲ್ಲಿ 13 ಜನರು ಮೃತಪಟ್ಟಿದ್ದರು ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಈ ರ್ಯಾಲಿಯಲ್ಲಿ ಕೇಂದ್ರ ಕೋಲ್ಕತ್ತಾದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಬಿಜೆಪಿ ಈ ರ್ಯಾಲಿಯನ್ನು ಸರ್ಕಸ್ ಎಂದು ವ್ಯಂಗ್ಯವಾಡಿದೆ. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿಎಂಸಿಗೆ ಸವಾಲಾಗಿ ಪರಿಣಮಿಸಿದೆ.
ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಮಾತನಾಡಿ "ಜನರಿಂದ ಅವರು ತೆಗೆದುಕೊಂಡ ಕಟ್ ಹಣವನ್ನು ಹಿಂದಿರುಗಿಸದೆ ಯಾವುದೇ ಟಿಎಂಸಿ ನಾಯಕರು ರ್ಯಾಲಿಗೆ ತೆರಳಲು ನಾವು ಅನುಮತಿಸುವುದಿಲ್ಲ. ಅವರನ್ನು ಬಸ್ಸುಗಳಿಂದ ಹೊರಗೆ ಎಳೆಯುತ್ತೇವೆ" ಎಂದು ಘೋಷ್ ಹೇಳಿದರು. ಜೂನ ತಿಂಗಳಿಂದ ತೃಣಮೂಲ ಕಾಂಗ್ರೆಸ್ ಶಾಸಕರ ವಿರುದ್ಧ ಕಟ್ ಹಣ ದ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿವೆ.
ಇನ್ನೊಂದೆಡೆಗೆ ತೃಣಮೂಲ ಕಾಂಗ್ರೆಸ್ ಘೋಷ್ ಅವರ ಹೇಳಿಕೆಯನ್ನು ಖಂಡಿಸಿದ್ದು, ಅವರ ಹೇಳಿಕೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಲಿದೆ ಎಂದು ಆರೋಪಿಸಿದೆ.ಟಿಎಂಸಿ ಮುಖಂಡರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಬಿಜೆಪಿ ಆದೇಶದ ಹಿನ್ನಲೆಯಲ್ಲಿ ಭಾನುವಾರದಂದು ಕೇವಲ ಶೇ 30 ರಷ್ಟು ರೈಲುಗಳನ್ನು ಮಾತ್ರ ಓಡಿಸಲಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.