ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 41ರಷ್ಟು ಸೀಟು ಹಂಚಿದ ತೃಣಮೂಲ ಕಾಂಗ್ರೆಸ್
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರದಂದು 42 ಲೋಕಸಭಾ ಸ್ಥಾನಗಳಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ್ದಾರೆ. ವಿಶೇಷವೆಂದರೆ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿಯನ್ನು ನೀಡುವ ಕಾಯ್ದೆ ಇನ್ನು ಕೂಡ ಜಾರಿಗೆ ಬಂದಿಲ್ಲ, ಅದಕ್ಕೂ ಮುನ್ನವೇ ಈಗ ಮಮತಾ ಈಗ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಮುಂದಾಗಿದ್ದಾರೆ.
ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರದಂದು 42 ಲೋಕಸಭಾ ಸ್ಥಾನಗಳಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ್ದಾರೆ. ವಿಶೇಷವೆಂದರೆ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿಯನ್ನು ನೀಡುವ ಕಾಯ್ದೆ ಇನ್ನು ಕೂಡ ಜಾರಿಗೆ ಬಂದಿಲ್ಲ, ಅದಕ್ಕೂ ಮುನ್ನವೇ ಈಗ ಮಮತಾ ಈಗ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಮುಂದಾಗಿದ್ದಾರೆ.
ಈಗ 42 ಸ್ಥಾನಗಳಿಗಾಗಿನ ಅಭ್ಯರ್ಥಿಗಳ ಪಟ್ಟಿಯಲ್ಲಿ 10 ಹಾಲಿ ಸಂಸದರಿಗೆ ಟಿಕೆಟ್ ನ್ನು ನಿರಾಕರಿಸಲಾಗಿದೆ.ಅಚ್ಚರಿಯೆಂದರೆ ಇದರಲ್ಲಿ ಹಾರ್ವಡ್ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಇತಿಹಾಸಕಾರ ಸುಗತೋ ಬೋಸ್ ಅವರು ಹೆಸರು ಕೂಡ ಇದೆ. ವಿವಿಯಿಂದ ಅನುಮತಿ ಸಿಗದ ಕಾರಣ ಈ ಬಾರಿ ಅವರಿಗೆ ಸೀಟು ನೀಡಿಲ್ಲ ಎನ್ನಲಾಗಿದೆ. ಈ ಸ್ಥಾನದಲ್ಲಿ ನಟಿ ಮಿಮಿ ಚಕ್ರವರ್ತಿಯವರಿಗೆ ಸೀಟು ಹಂಚಿಕೆ ಮಾಡಲಾಗಿದೆ.
ಏಪ್ರಿಲ್ 11 ರಂದು ಪ್ರಾರಂಭವಾಗುವು ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎನ್ನಲಾಗಿದೆ.ಅಂತಿಮ ಫಲಿತಾಂಶ ಮೇ 23 ರಂದು ತಿಳಿಯಲಿದೆ.ಈ ಬಾರಿ ಬಂಗಾಳದಲ್ಲಿ ಆಡಳಿತ ಪಕ್ಷ ತೃಣಮೂಲಕ್ಕೆ ಬಿಜೆಪಿ ಪ್ರತಿಸ್ಪರ್ಧೆ ನೀಡಲಿದೆ ಎನ್ನಲಾಗಿದೆ.ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ಬಾರಿ ಮೈತ್ರಿಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸಲಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜೀ "ವಿವಿಐಪಿ ಗಳು ಮತದಾರರಿಗೆ ಹಣ ಹಂಚಿಕೆ ಮಾಡಲು ಹೆಲಿಕಾಪ್ಟರ್ ಹಾಗೂ ಚಾರ್ಟೆಡ್ ವಿಮಾನಗಳನ್ನು ಬಳಸಿ ಕೊಳ್ಳುವ ಮಾಹಿತಿ ತಮ್ಮ ಬಳಿ ಇದೆ ಎಂದರು.