ನವದೆಹಲಿ: ವಿಲಕ್ಷಣ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ 17 ವರ್ಷದ ಮಗಳನ್ನು ಶಿರಚ್ಚೆದ ಮಾಡಿ ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಯನ್ನು ತಲುಪಿದ ಘಟನೆ ಬುಧುವಾರದಂದು ಉತ್ತರ ಪ್ರದೇಶದ ಹಾರ್ಡೊಯ್ ಜಿಲ್ಲೆಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಪೊಲೀಸರ ಪ್ರಕಾರ, ತಾನು ಇಷ್ಟಪಡದ ಯುವಕನೊಂದಿಗಿನ ತನ್ನ ಮಗಳು ಸಂಬಂಧ ಹೊಂದಿದ್ದರಿಂದಾಗಿ ತಂದೆ ಸರ್ವೇಶ್ ಅಸಮಾಧಾನಗೊಂಡು ಈ ಕೃತ್ಯ ಕೈಗೊಂಡಿದ್ದಾನೆ. ಎರಡು ದಿನಗಳ ಹಿಂದೆ ತಮ್ಮ ಮಗಳು ಪ್ರಿಯಕರನೊಂದಿಗೆ ಕಂಡು ಬಂದ ನಂತರ ಅವರಿಗೆ ಪಾಠ ಕಲಿಸಲು ನಿರ್ಧರಿಸಿದ್ದನು ಎನ್ನಲಾಗಿದೆ.ಬುಧವಾರ, ತರಕಾರಿ ಮಾರಾಟಗಾರ ಸರ್ವೇಶ್ ತನ್ನ ಮಗಳನ್ನು ಮನೆಯಲ್ಲಿ ಒಬ್ಬಂಟಿಯಾಗಿ ಕಂಡು ತೀಕ್ಷ್ಣವಾದ ಅಂಚಿನ ಆಯುಧದಿಂದ ಶಿರಚ್ಚೇದ ಮಾಡಿದ್ದಾನೆ.


ಇದನ್ನೂ ಓದಿ: Kisan Mahapanchayat: ಉತ್ತರ ಪ್ರದೇಶದ ಈ ಜಿಲ್ಲೆಯಲ್ಲಿ 2 ತಿಂಗಳ ಕಾಲ ಸೆಕ್ಷನ್ 144 ಜಾರಿ


ಪಂಡೇತರ ಗ್ರಾಮದ ಸರ್ವೇಶ್ ಕುಮಾರ್ ತನ್ನ ಮಗಳ ಕತ್ತರಿಸಿದ ತಲೆಯೊಂದಿಗೆ ಮಾಜಿಲಾ ಪೊಲೀಸ್ ಠಾಣೆ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದಾಗ ಆ ಪ್ರದೇಶದಲ್ಲಿ ಭೀತಿ ಆವರಿಸಿತ್ತು.ಸ್ಥಳೀಯರಿಂದ ಮಾಹಿತಿ ಪಡೆದ ನಂತರ ಇಬ್ಬರು ಪೊಲೀಸರು ಆತನನ್ನು ತಡೆದು ಲಖನೌದಿಂದ 143 ಕಿ.ಮೀ ದೂರದಲ್ಲಿರುವ ಪೊಲೀಸ್ ಠಾಣೆಗೆ ಕರೆತಂದರು. ಈ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ತಿಳಿಸಿದ್ದಾರೆ.


ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ 50 ವರ್ಷದ ಮಹಿಳೆ ಮೇಲೆ ಸಾಮೂಹಿಕ ಹತ್ಯಾಚಾರ


ಎನ್‌ಸಿಆರ್‌ಬಿಯ "ಕ್ರೈಮ್ ಇನ್ ಇಂಡಿಯಾ" 2019 ರ ವರದಿಯ ಪ್ರಕಾರ, ಉತ್ತರ ಪ್ರದೇಶ (Uttar Pradesh) ವು ಮಹಿಳೆಯರ ಮೇಲಿನ ಅತಿ ಹೆಚ್ಚು ಅಪರಾಧಗಳನ್ನು ವರದಿ ಮಾಡಿದೆ (59,853), ದೇಶಾದ್ಯಂತ ಇಂತಹ ಪ್ರಕರಣಗಳಲ್ಲಿ ಶೇಕಡಾ 14.7 ರಷ್ಟಿದೆ. ಪೋಕ್ಸೊ ಕಾಯ್ದೆಯಡಿ ಯುಪಿ ಹೆಣ್ಣು ಮಕ್ಕಳ ವಿರುದ್ಧ ಅತಿ ಹೆಚ್ಚು ಅಪರಾಧಗಳನ್ನು ಹೊಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.