ಜಾತಿ ಗಲಭೆಗೆ ಮನನೊಂದು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಭೂಪ!
ನವದೆಹಲಿ: ಆರ್ ಎಸ್ ಎಸ್ ಸಂಘಟನೆಗೆ ಸೇರಿದ ರಘುವೀರ್ ಶರಣ್ ಎನ್ನುವ ಜೈಪುರ್ ಮೂಲದ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ.
45 ವರ್ಷದ ಶರಣ್ ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಲಭೆಗಳಿಗೆ ಮನನೊಂದು ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾನೆ.ಜೈಪುರದ ವೈಶಾಲಿಯಲ್ಲಿ ವ್ಯಕ್ತಿಯು ಬೆಂಕಿ ಹಚ್ಚಿಕೊಂಡು 100 ಮೀಟರ್ ಗಳವರೆಗೆ ಭಾರತ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತಾ ಓಡಿಹೋಗಿದ್ದಾನೆ, ಆ ಸಂದರ್ಭದಲ್ಲಿ ಜನರು ಬೆಂಕಿ ಆರಿಸಲು ನೀರನ್ನು ಎರಚಿದ್ದಾರೆ.
ಈ ವ್ಯಕ್ತಿಯನ್ನು ಔಷಧಿಗಳ ಡೀಲರ್ ಎಂದು ತಿಳಿದುಬಂದಿದೆ,ಬೆಂಕಿ ಹಚ್ಚಿಕೊಂಡ ನಂತರ ಅವನ್ನು ಸವಾಯಿ ಮಾನ್ ಸಿಂಗ್ ಹಾಸ್ಪೆತಲ್ ಗೆ ಸಾಗಿಸಲಾಗಿದೆ. ಅಲ್ಲಿಂದ ನಂತರ ದೆಹಲಿಯ ಎಮ್ಸ್ ಆಸ್ಪತ್ರೆಗೆ ಕರೆದ್ಯೋಯ್ಯಲಾಗಿದೆ,ಶೇ 80 ರಷ್ಟು ದೇಹದ ಭಾಗ ಸುಟ್ಟಿದ್ದರಿಂದ ದೆಹಲಿಯಲ್ಲಿ ಮೃತಪಟ್ಟಿದ್ದಾನೆ.
ಪ್ರಾಥಮಿಕ ಮೂಲಗಳ ಪ್ರಕಾರ ಶರಣ್ ಇತ್ತಿಚಿಗಿನ ಎಸ್ಸಿ ಎಸ್ಟಿ ಕಾಯ್ದೆ ವಿಚಾರದಲ್ಲಿ ಆದ ಗಲಭೆ ಮತ್ತು ಜಾತಿ ಆಧಾರಿತ ಮೀಸಲಾತಿಗೆ ಮನನೊಂದಿದ್ದಾನೆ ಎಂದು ತಿಳಿದುಬಂದಿದೆ.