ನವದೆಹಲಿ: ದಕ್ಷಿಣ ಕೋಲ್ಕತ್ತಾದಲ್ಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಶನಿವಾರದಂದು ತಡರಾತ್ರಿ ಗಡಿ ಗೋಡೆಗಳನ್ನು ಹತ್ತಿದ ಅತಿಕ್ರಮಣಕಾರನೊಬ್ಬ ಇಡೀ ರಾತ್ರಿ ಮನೆಯೊಳಗೆ ಅಡಗಿಕೊಂಡಿದ್ದ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಭಾನುವಾರ ಬೆಳಗ್ಗೆ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿ ಆತನನ್ನು ಸ್ಥಳೀಯ ಕಾಳಿಘಾಟ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.ಈಗ ಯಾವ ಉದ್ದೇಶದಿಂದ ಆ ಹೈ-ಸೆಕ್ಯುರಿಟಿ ವಲಯವನ್ನು ಪ್ರವೇಶಿಸಲು ಧೈರ್ಯಮಾಡಿದ ಮತ್ತು ನಿವಾಸದ ಗೋಡೆಗಳನ್ನು ಹತ್ತಿದ ಎನ್ನುವ ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ಹಾವಳಿ: 1 ಲಕ್ಷ ಮೀರಿದ ಸಕ್ರಿಯ ಪ್ರಕರಣಗಳ ಸಂಖ್ಯೆ


ಭದ್ರತಾ ಸಿಬ್ಬಂಧಿಯ ಹಾಗೂ ಅಲ್ಲಿನ ಸಿಸಿಟಿವಿ ಕ್ಯಾಮರಾಗಳ ಕಣ್ಣು ತಪ್ಪಿಸಿ ಸಿಎಂ ಮನೆಗೆ ನುಗ್ಗಿದ್ದು ಹೇಗೆ ?ಎನ್ನುವುದನ್ನು ಪೊಲೀಸರು ತನಿಖೆ ನಡೆಸಿದ್ದಾರೆ.ಇತ್ತೀಚಿಗಷ್ಟೇ ಅದೇ ಪ್ರದೇಶದಲ್ಲಿ ವಯೋವೃದ್ಧ ದಂಪತಿಯನ್ನು ಹತ್ಯೆ ಮಾಡಲಾಗಿದ್ದು, ಇದಾದ ನಂತರ ಅಲ್ಲಿನ ಭದ್ರತಾ ವ್ಯವಸ್ಥೆಯ ಲೋಪಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು. ಆದರೆ ಆಗ ಅಲ್ಲಿ ಅಳವಡಿಸಲಾಗಿದ್ದ ಹಲವಾರು ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸದೇ ಇರುವುದು ತನಿಖೆ ನಂತರ ತಿಳಿದುಬಂದಿತ್ತು,


ಇದನ್ನೂ ಓದಿ: Mens Health : ಪುರುಷರೆ ನಿಮ್ಮ ದೇಹದಲ್ಲಿ 5 ಲಕ್ಷಣಗಳು ಕಂಡು ಬಂದರೆ ಅದು Testosterone ಕೊರತೆ ಸಮಸ್ಯೆ!


ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿದ ನಗರ ಪೋಲಿಸ್ ಅಧಿಕಾರಿಗಳೊಬ್ಬರು ಪೊಲೀಸ್ ಸಿಬ್ಬಂದಿಯ ನಿರ್ಲಕ್ಷ್ಯವನ್ನು ತಳ್ಳಿಹಾಕಲಾಗುವುದಿಲ್ಲ, ಮುಖ್ಯಮಂತ್ರಿ ನಿವಾಸದ ಭದ್ರತಾ ವ್ಯವಸ್ಥೆಗಳ ಉಸ್ತುವಾರಿ ವಹಿಸಿರುವ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಮತ್ತು ನಿರ್ಲಕ್ಷ್ಯದ ಭಾಗದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ