ತೆಲಂಗಾಣ : ಅಜ್ಜ-ಮೊಮ್ಮಕ್ಕಳ ಬಾಂಧವ್ಯವನ್ನು ಒಂದೇ ಮಾತಿನಲ್ಲಿ ವರ್ಣಿಸಿಲು ಸಾಧ್ಯವಾಗದು. ಪೋಷಕರು ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಅಜ್ಜಿ-ಅಜ್ಜ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಕಥೆಗಳನ್ನು ಹೇಳುತ್ತಾ ತುತ್ತು ತಿನ್ನಿಸುವ ತಾತ.. ತೊಡೆಯ ಮೇಲೆ ಮಲಗಿಸಿಕೊಂಡು ಹಾಡು ಹಾಡುತ್ತ ಮಲಗಿಸುವ ಅಜ್ಜಿಯ ಮಮತೆ ಅದ್ಭುತ..


COMMERCIAL BREAK
SCROLL TO CONTINUE READING

ಅಂತಹ ಅಜ್ಜನ ಹಠಾತ್ ಮರಣವನ್ನು ಅರಗಿಸಿಕೊಳ್ಳಲಾಗದ ಮೊಮ್ಮಗನೊಬ್ಬ ಮೂರು ತಿಂಗಳ ನಂತರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೂಸೈಡ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಚಿಕ್ಕ ಪತ್ರ ಯುವಕ ಮತ್ತು ಅಜ್ಜನ ನಡುವಿನ ಸಂಬಂಧವನ್ನು ವಿವರಿಸುತ್ತದೆ.


ಇದನ್ನೂ ಓದಿ:ಧನಶ್ರೀ ತಂಟೆಗೆ ಬಂದ್ರೆ.. ಯಜುವೇಂದ್ರ ಚಹಲ್‌ಗೆ ಬೆದರಿಕೆ..! ಫೋಟೋ ವೈರಲ್‌ ಬೆನ್ನಲ್ಲೆ ಸತ್ಯ ಬಿಚ್ಚಿಟ್ಟ ಡಾನ್ಸ್‌ ಮಾಸ್ಟರ್‌


ಹೈದರಾಬಾದ್‌ನ ಪೇಟ್ ಬಶೀರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಪಲ್ಲಿ ನಿವಾಸಿ ಮನೋಜ್ (27) ಸಾವನ್ನಪ್ಪಿರುವ ಯುವಕ. ಮೂರು ತಿಂಗಳ ಹಿಂದೆ ಮನೋಜ್‌ ಅಜ್ಜ ಅನಾರೋಗ್ಯದಿಂದ ನಿಧನರಾದರು. ತಾತನ ಸಾವಿನಿಂದ ಯುವಕ ತೀವ್ರವಾಗಿ ನೊಂದಿದ್ದ. 'ಅಜ್ಜನಿಗೆ ನಾನು ಬರಬೇಕಂತೆ... ‘ಅಜ್ಜನ ಬಳಿ ಹೋಗುತ್ತೇನೆ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. 


ಬುಧವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಣ್ಣ ಕಾಗದದಲ್ಲಿ ಆತ್ಮಹತ್ಯೆಗೆ ಕಾರಣವನ್ನು ವಿವರಿಸಿದ್ದಾನೆ. ಒಟ್ಟಾರೆಯಾಗಿ ಅಜ್ಜನ ಮೇಲಿನ ಪ್ರೀತಿಯಿಂದ ಸಾವಿಗೆ ಶರಣಾದ ಯುವಕನಿಗೆ ತನ್ನ ತಂದೆ-ತಾಯಿನ ನೋವು ಅರ್ಥವಾಗಲಿಲ್ಲ.. ಇದೀಗ ಮಗನನ್ನು ಕಳೆದುಕೊಂಡು ಪೋಷಕರು ಕಣ್ಣೀರಿಡುತ್ತಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.