ಕೊಲ್ಕತ್ತಾ-ಮುಂಬೈ ಜೆಟ್ ಏರ್ವೇಸ್ ವಿಮಾನ ಸ್ಪೋಟಿಸುವ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ
ಜೆಟ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಓರ್ವ ವ್ಯಕ್ತಿಯೋಬ್ಬನು ವಿಮಾನವನ್ನು ಸ್ಫೋಟಿಸುವಂತೆ ಬೆದರಿಕೆ ಹಾಕಿದ್ದಕ್ಕಾಗಿ ಬಂಧಿಸಲಾಗಿದೆ.ಎಎನ್ಐ ಪ್ರಕಾರ ಆ ವ್ಯಕ್ತಿ ಫೋನ್ನಲ್ಲಿ ಮಾತನಾಡುತ್ತಿದ್ದ ವೇಳೆ ವಿಮಾನವನ್ನು ಸ್ಫೋಟಿಸುವ ಬೆದರಿಕೆ ಹಾಕಿದ್ದರು ಎಂದು ವರದಿ ಮಾಡಿದೆ.ಈ ವಿಮಾನವು ಕೊಲ್ಕತ್ತಾದಿಂದ ಮುಂಬೈಗೆ ಹೊರಟಿತ್ತು ಎಂದು ತಿಳಿದು ಬಂದಿದೆ.
ನವದೆಹಲಿ: ಜೆಟ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಓರ್ವ ವ್ಯಕ್ತಿಯೋಬ್ಬನು ವಿಮಾನವನ್ನು ಸ್ಫೋಟಿಸುವಂತೆ ಬೆದರಿಕೆ ಹಾಕಿದ್ದಕ್ಕಾಗಿ ಬಂಧಿಸಲಾಗಿದೆ.ಎಎನ್ಐ ಪ್ರಕಾರ ಆ ವ್ಯಕ್ತಿ ಫೋನ್ನಲ್ಲಿ ಮಾತನಾಡುತ್ತಿದ್ದ ವೇಳೆ ವಿಮಾನವನ್ನು ಸ್ಫೋಟಿಸುವ ಬೆದರಿಕೆ ಹಾಕಿದ್ದರು ಎಂದು ವರದಿ ಮಾಡಿದೆ.ಈ ವಿಮಾನವು ಕೊಲ್ಕತ್ತಾದಿಂದ ಮುಂಬೈಗೆ ಹೊರಟಿತ್ತು ಎಂದು ತಿಳಿದು ಬಂದಿದೆ.
ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ಈ ಆರೋಪಿಯನ್ನು ಜೆ.ಪೊದ್ದಾರ್ ಎಂದು ಗುರುತಿಸಲಾಗಿದ್ದು, ಈಗ ಅವನನ್ನು ಸಿಐಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ.ಕೊಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್ವೇಸ್ ವಿಮಾನ 9W0472 ಸುಮಾರು 8.15 ಗಂಟೆಗೆ ವಿಮಾನ ಹೊರಡುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಆಗ ಎಲ್ಲಾ ಪ್ರಯಾಣಿಕರನ್ನು ಕೊಲ್ಲುವುದಾಗಿ ಮತ್ತು ವಿಮಾನವನ್ನು ಸ್ಫೋಟಿಸುವುದಾಗಿ ಆ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.
ಆ ವ್ಯಕ್ತಿ ಫೋನಿನಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡ ಸಹ ಪ್ರಯಾಣಿಕರು ಪೈಲೆಟ್ ಮತ್ತು ವಿಮಾನ ಸಿಬ್ಬಂಧಿಗೆ ತಿಳಿಸಿದರು. ಅನಂತರ ಅವರು ಏರ್ ಟ್ರಾಫಿಕ್ ಕಂಟ್ರೋಲ್ ಗೆ ಮಾಹಿತಿ ನೀಡಿದ್ದಾರೆ. ಆಗ ವಿಮಾನವನ್ನು ಟ್ಯಾಕ್ಸಿ ಬೇ ಗೆ ತಿರುಗಿಸಿ ಸೂಕ್ತ ಸ್ಥಳದಲ್ಲಿ ಸ್ಥಗಿತಗೊಳಿಸಲಾಗಿದೆ. ಅನಂತರ ಎಲ್ಲ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.ಅಂತಿಮ ವರದಿ ಬರುವವರೆಗೂ ಸಿಐಎಸ್ಎಫ್ ಸಿಬ್ಬಂದಿ ಆ ಶಂಕಿತ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ.