ನವದೆಹಲಿ: ಮಧ್ಯಪ್ರದೇಶದ ದಿಂಡೋರಿಯಲ್ಲಿ ವೃತ್ತಿಯಲ್ಲಿ ವಕೀಲನಾಗಿರುವ ವ್ಯಕ್ತಿಯೊಬ್ಬ ಕಳೆದ ನಲವತ್ತು ವರ್ಷಗಳಿಂದ ಗಾಜುಗಳನ್ನು ತಿನ್ನುವ ಹವ್ಯಾಸ ರೂಡಿಸಿಕೊಂಡಿದ್ದಾನೆ. ವೃತ್ತಿಯಲ್ಲಿ ವಕೀಲರಾಗಿರುವ ದಯಾರಾಮ್ ಸಾಹು ಎನ್ನುವ ವ್ಯಕ್ತಿ ಬಾಲ್ಯದಿಂದಲೂ ಗಾಜಿನ ಬಲ್ಬ್ಗಳು, ಮದ್ಯದ ಬಾಟಲಿಗಳು ಮತ್ತು ಇತರ ವಸ್ತುಗಳನ್ನು ತಿನ್ನುವ ರೂಡಿ ಬೆಳೆಸಿಕೊಂಡಿದ್ದಾನೆ.


COMMERCIAL BREAK
SCROLL TO CONTINUE READING

ಈಗ ತಮ್ಮ ಈ ವಿಚಿತ್ರಕಾರಿ ಹವ್ಯಾಸದ ಬಗ್ಗೆ ಪ್ರತಿಕ್ರಿಯಿಸಿರುವ ಸಾಹು' ನಾನು ಬೇರೆ ಏನನ್ನಾದರೂ ಮಾಡಲು ಬಯಸಿದ್ದೇ, ಆದ್ದರಿಂದ ನಾನು ಇದನ್ನು ಪ್ರಾರಂಭಿಸಿದೆ. ಮೊದಲು ಅದನ್ನು ಸೇವಿಸಿದಾಗ ನನಗೆ ರುಚಿ ಅನಿಸಿತು. ಗಾಜನ್ನು ನಾನು ತಿನ್ನಬಹುದೆಂದು ಜನರಿಗೆ ತಿಳಿದಾಗ, ಅವರಿಗೆ ಅಚ್ಚರಿಯಾಯಿತು. ಹಾಗಾಗಿ ಅಂತಿಮವಾಗಿ ಅದನ್ನು ಪ್ರದರ್ಶಿಸುವ ಸಲುವಾಗಿ ನಾನು ತಿನ್ನುವುದನ್ನು ಮುಂದುವರೆಸಿದೆ, ಮುಂದೆ ಇದೇ ನನ್ನ ಅಭ್ಯಾಸವಾಯಿತು, ಎಂದು ತಿಳಿಸಿದರು. ಜನರಿಗೆ ಸಿಗರೇಟ್, ಮದ್ಯ ಮತ್ತು ಇತರ ವಸ್ತುಗಳಿಗೆ ವ್ಯಸನಿಯಾಗಿರುವಂತೆ ಇದು ತಮಗೆ ವ್ಯಸನವಾಗಿದೆ ಎಂದರು.


'ನಾನು ಯಾವತ್ತೂ ಯಾವುದೇ ಸಮಸ್ಯೆಗಳನ್ನು ಅನುಭವಿಸಲಿಲ್ಲ ಆದರೆ ದೊಡ್ಡ ಗಾಜಿನ ತುಂಡು ಹೊಟ್ಟೆಯಲ್ಲಿ ಹೋದರೆ ಅದು ನನ್ನ ಕರುಳಿಗೆ ಹಾನಿಯಾಗಬಹುದು, ಆದ್ದರಿಂದ ನಾನು ಈಗ ಅದನ್ನು ನಿಯಂತ್ರಿಸಿದ್ದೇನೆ ಮತ್ತು ವಿರಳವಾಗಿ ತಿನ್ನುತ್ತೇನೆ" ಎಂದು ಅವರು ಹೇಳುತ್ತಾರೆ. ಇನ್ನು ಮುಂದುವರೆದು ಇದು ಆರೋಗ್ಯಕ್ಕೆ ಅಪಾಯಕಾರಿಯಾದ ಕಾರಣ ಇದನ್ನು ಅನುಸರಿಸಲು ಜನರಿಗೆ ಸಲಹೆ ನೀಡುವುದಿಲ್ಲ ಎಂದು ಅವರು ಹೇಳಿದರು.


ಜನರು ಗಾಜು ತಿನ್ನಲು ಪ್ರಯತ್ನಿಸಬಾರದು ಮತ್ತು ಇದು ದೇಹದ ಆಂತರಿಕ ಭಾಗಗಳಿಗೆ ಹಾನಿಯನ್ನುಂಟುಮಾಡಬಹುದು ಎಂದು ಶಹಪುರದ ಸರ್ಕಾರಿ ಆಸ್ಪತ್ರೆಯ ವೈದ್ಯ ಸತೇಂದ್ರ ಪ್ಯಾರಾಸ್ಟೆ ಹೇಳಿದ್ದಾರೆ. ಗಾಜು ಜೀರ್ಣವಾಗದ ಕಾರಣ, ಜನರು ಅದನ್ನು ತಿನ್ನಬಾರದು. ಇದು ಅಲಿಮೆಂಟರಿ ಕಾಲುವೆಯ ಮೂಲಕ ಹಾದುಹೋದಾಗ, ಇದು ಹುಣ್ಣು ಮತ್ತು ಸೋಂಕಿಗೆ ಕಾರಣವಾಗುವ ಗಾಯಗಳಿಗೆ ಕಾರಣವಾಗಬಹುದು. ಇದು ಹೊಟ್ಟೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಸಲಹೆ ನೀಡಿದರು.