ನವದೆಹಲಿ: ವ್ಯಕ್ತಿಯೋರ್ವ ನಾಲಿಗೆ ಸ್ವಚ್ಛಗೊಳಿಸುವಾಗ ಅನಿರೀಕ್ಷಿತವಾಗಿ ಟೂತ್ ಬ್ರಶ್ ನುಗಿಂದ ವಿಚಿತ್ರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ದೆಹಲಿಯ ಸಿಮಾಪುರಿ ಪ್ರದೇಶದ ನಿವಾಸಿ ಅವಿದ್(36) ಎಂಬಾತ ಬೆಳಗ್ಗೆ ಬ್ರಶ್​ ಮಾಡಿದ ನಂತರ ಅದರ ಹಿಂಭಾಗದಿಂದ ನಾಲಿಗೆಯನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಗಂಟಲೊಳಗೆ ಇಳಿದ ಬ್ರಶ್​ ಹೊರಬರಲೇ ಇಲ್ಲ! ಬಳಿಕ ಆತನಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಗ ಆಟ ಆಸ್ಪತ್ರೆಯಲ್ಲಿ ತಾನು 12 ಸೆಂ.ಮೀ ಉದ್ದದ ಟೂತ್ ಬ್ರಶ್ ನುಂಗಿದ್ದಾಗಿ ಹೇಳಿದ್ದಾನೆ.


ಕೂಡಲೇ ಆತನನ್ನು ವೈದ್ಯರು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಅದರಂತೆ ಏಮ್ಸ್ ಆಸ್ಪತ್ರೆಯಲ್ಲಿ ಎಂಡೋಸ್ಕೊಪಿ ಮಾಡುವ ಮೂಲಕ ಆತನ ಹೊಟ್ಟೆಯಿಂದ ಬ್ರಶ್ ಅನ್ನು ಹೊರತೆಗೆದಿದ್ದಾರೆ. ಈ ಘಟನೆ ಡಿಸೆಂಬರ್ 8 ರಂದು ನಡೆದಿದ್ದು, ಡಿಸೆಂಬರ್ 10 ರಂದು ಆತನ ಹೊಟ್ಟೆಯಿಂದ ಬ್ರಶ್ ಹೊರತೆಗೆಯಲಾಗಿದೆ. 


ಆ ಬ್ರಶ್​ನಿಂದ ಜೀರ್ಣಾಂಗಕ್ಕೆ ಏನಾದರೂ ಹಾನಿಯಾಗಿದೆಯಾ ಎಂದು ಪರಿಶೀಲಿಸಲಾಯಿತು. ಆದರೆ, ಅಬ್ಡಾಮೆನ್ ಭಾಗದಲ್ಲಿ ಆ ಬ್ರಶ್​ ಸಿಲುಕಿಕೊಂಡಿದ್ದರಿಂದ ಅದರಿಂದ ಬೇರಾವ ಭಾಗಕ್ಕೂ ತೊಂದರೆ ಆಗಿಲ್ಲ ಎಂಬುದು ಗೊತ್ತಾಯಿತು. ಹೀಗಾಗಿ, ಆಪರೇಷನ್​ ಮಾಡದೆ ಎಂಡೋಸ್ಕೋಪಿ ಮೂಲಕ ಆ ಬ್ರಶ್​ ಅನ್ನು ಹೊರತೆಗೆಯಲಾಯಿತು ಎಂದು ಎಐಐಎಂಎಸ್​ನ ತುರ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್​ ಅಗರವಾಲ್​ ತಿಳಿಸಿದ್ದಾರೆ.