Watch: ಮೇನಕಾ ಗಾಂಧಿ, ಮಹಾಘಟಬಂಧನ್ ಅಭ್ಯರ್ಥಿ ನಡುವೆ ವಾಗ್ವಾದ ..!
ಸುಲ್ತಾನ್ ಪುರದಲ್ಲಿ ಬಿಜೆಪಿ ಮೇನಕಾ ಗಾಂಧಿ ಹಾಗೂ ಮಹಾಘಟಬಂಧನ್ ಅಭ್ಯರ್ಥಿ ಸೋನುಸಿಂಗ್ ನಡುವೆ ಮತದಾನದ ಸಂದರ್ಭದಲ್ಲಿ ವಾಗ್ವಾದ ನಡೆದಿದೆ.ಈಗ ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಮೇನಕಾ ಗಾಂಧಿಯವರು ಸಿಂಗ್ ಅವರ ಬೆಂಬಲಿಗರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನವದೆಹಲಿ: ಸುಲ್ತಾನ್ ಪುರದಲ್ಲಿ ಬಿಜೆಪಿ ಮೇನಕಾ ಗಾಂಧಿ ಹಾಗೂ ಮಹಾಘಟಬಂಧನ್ ಅಭ್ಯರ್ಥಿ ಸೋನುಸಿಂಗ್ ನಡುವೆ ಮತದಾನದ ಸಂದರ್ಭದಲ್ಲಿ ವಾಗ್ವಾದ ನಡೆದಿದೆ.ಈಗ ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಮೇನಕಾ ಗಾಂಧಿಯವರು ಸಿಂಗ್ ಅವರ ಬೆಂಬಲಿಗರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೆರೆಯಾಗಿರುವ ದೃಶ್ಯದಲ್ಲಿ ಇಬ್ಬರು ಮುಖಂಡರು ಪರಸ್ಪರ ವಾದಿಸುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಮೇನಕಾಗಾಂಧಿ ತಮ್ಮ ಪ್ರತಿಸ್ಪರ್ಧಿಗೆ ಈ ದಬ್ಬಾಳಿಕೆ ನಡವಳಿಕೆ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ಸಿಂಗ್ ತಾವು ಯಾವುದೇ ತಪ್ಪು ಮಾಡಿಲ್ಲವೆಂದು ಹೇಳಿದರು.ಇವರ ಹಿಂದೆ ಬಂದಿದ್ದ ಹಿಂಬಾಲಕರು ಸಿಂಗ್ ಅವರನ್ನು ಬೆಂಬಲಿಸಿ ಘೋಷಣೆ ಕೂಗಿದರು.
ಇನ್ನೊಂದೆಡೆಗೆ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮೇನಕಾ ಗಾಂಧಿ " ನಾವು ಮತಗಟ್ಟೆ ತಪಾಸಣೆಗಾಗಿ ಇಲ್ಲಿಗೆ ಬಂದಿದ್ದೇವೆ. ಮತದಾನ ಕೇಂದ್ರಗಳಲ್ಲಿ ಅಥವಾ ಅದರ ಸುತ್ತಲೂ ಯಾವುದೇ ಕ್ರಿಮಿನಲ್ ಸಂಗತಿಗಳು ನಡೆಯಬಾರದು ಎಂದು ಎಚ್ಚರಿಸುತ್ತಿದ್ದೇನೆ. ಸಿಂಗ್ ಅವರೊಂದಿಗೆ ಇರುವ ಒಬ್ಬ ವ್ಯಕ್ತಿ ಸೆರೆಮನೆಯಿಂದ ತಲೆಮರೆಸಿಕೊಂಡಿದ್ದಾರೆ.ಈ ಜನರು ಮತದಾನಕ್ಕೆ ಮುಂಚಿತವಾಗಿ ಜನರಿಗೆ ಬೆದರಿಕೆ ಹಾಗೂ ಒತ್ತಡ ಹಾಕುತ್ತಾರೆ. ಪ್ರತಿಯೊಬ್ಬರೂ ತಮ್ಮ ಮತಗಳನ್ನು ಮುಕ್ತವಾಗಿ ಮತ್ತು ಶಾಂತಿಯುತವಾಗಿ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ "ಎಂದು ಮೇನಕಾ ಹೇಳಿದ್ದಾರೆ.